ಉತ್ತರ ಕರ್ನಾಟಕದ ಲಿಂಗಾಯತ ನಾಯಕರನ್ನು ಸಿಎಂ ಮಾಡಲಿ-ಯತ್ನಾಳ್


ಯಾವುದೇ ಸಮಯದಲ್ಲಿ ಚುನಾವಣೆ ನಡೆಯಲಿದ್ದು ಕಾರ್ಯಕರ್ತರು ಸಿದ್ದರಾಗಿರಬೇಕು ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಸವನಗೌಡ ಯತ್ನಾಳ ಹೇಳಿದರು. ಅವರು ಹುಲಿಗಿಯ ಗವಿಮಠ ಆವರಣದಲ್ಲಿ ನಡೆದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿದ್ದು ಚುನಾವಣೆಗಾಗಿ ಪರಿಶ್ರಮಿಸಬೇಕು , ಲಿಂಗಾಯತ ಜನಾಂಗದ ನಾಯಕರೆಂದು ತಮ್ಮನ್ನು ಕರೆದುಕೊಳ್ಳುವ ಯಡಿಯೂರಪ್ಪ ಉತ್ತರ ಕರ್ನಾಟಕದ ಲಿಂಗಾಯತ ನಾಯಕರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದರು. ಸಭೆಯಲ್ಲಿ ಬಸವರಾಜ್ ಪಾಟೀಲ್ ಅನ್ವರಿ, ನಾಗಪ್ಪ ಸಾಲೋಣಿ, ಕೆ.ಎಂ.ಸಯ್ಯದ್, ಪ್ರದೀಪಗೌಡ ಮಾಲಿಪಾಟೀಲ್, ದೊಡ್ಡಯ್ಯ ಗದ್ದಡಕಿ, ಕಲಾವತಿ ಸುಬ್ಬಾರಡ್ಡಿ ,ಚಂದ್ರು ಕವಲೂರ, ವಿರೇಶ ಮಹಾಂತಯ್ಯನಮಠ, ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply