‘ಒಡೆದ ಹೃದಯ ಗವಿಮಠ ಬೀದಿಯಲ್ಲಿ ಲೋಕಾರ್ಪಣೆ.’

ಪ್ರೀತಿ ಹುಟ್ಟುವುದು, ಕಳೆದುಕೊಳ್ಳುವುದು ಮನೆ, ಮನದಲ್ಲಾದರೂ ಬೆಳೆಯುವುದು, ಸಿಹಿ ಕಹಿನೆನಪುಗಳನ್ನು ಮೆಲಕುಗಳೆಲ್ಲಾ ಬೀದಿಯಲ್ಲಿಯೇ  ಹಾಗಾಗಿ ಒಡೆದ ಹೃದಯ

ಗವಿಮಠ ಬೀದಿಯಲ್ಲಿ ಲೋಕಾರ್ಪಣೆಯನ್ನು,  ಮನೆ ಮನಗಳಿಗೆ ಪುಸ್ತಕಗಳನ್ನು ತಲುಪಿಸುವ ಕಾಯಕ ಮಾಡುತ್ತಿರುವ ಅಭಿನವ ಗಳಗನಾಥರೆಂದೆ ಹೆಸರು ಪಡೆದ ಹನುಮಂತಪ್ಪ ತುಬಾಕಿಯವರು ಸದರಿ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾರಾಟಕ್ಕೆ ನಿರತರಾದರು, ಕೇವಲ ೫ ರೂಗಳಿಗೆ ೬೦ ಕವನಗಳನ್ನು ತಲುಪಿಸುವ ಕಾಯಕ ಮುಂದುವರೆದ ಭಾಗವಿದು ಸಾಹಿತ್ಯ ಎಲ್ಲರಗೂ ಕೊಂಡು ಓದುವಂತಾಗಬೇಕು. ಒಡೆದ ಹೃದಯ ಕವನ ಸಂಕಲನ ಭಗ್ನಪೇಮಿಯಿಂದ ಭಗ್ನಪ್ರೇಮಿಗೊಸ್ಕರವೇ ರಚಿಸಲ್ಪಟ್ಟ ಕೃತಿ ಇದಾಗಿದೆ ಏಕೆಂದರೇ, ಅದೊಂದು ಘಳಿಗೆಯಷ್ಟೆ ದೃಷ್ಟಿ ಕೂಡಿದ ಕ್ಷಣ ಸಹಜವಾಗಿ ಗಂಡು ಹೆಣ್ಣುಗಳಿಗೆ ಆಗುವಂತಹ ಜೀವನದ ಒಂದು ಭಾಗವೇ ಪ್ರೀತಿ. ಹಾಳಾದದ್ದು ಕೆಲವೊಮ್ಮ ಹುಟ್ಟುತ್ತಲೇ ದೋಷಯುಕ್ತವಾಗಿರುತ್ತೆ ಈ ಪ್ರೀತಿ, ಯಾವುದೋ ನೆಪ ಮುರಿಯೋದಕ್ಕೆ, ಹತ್ತಾರು ಕಾರಣ ದೂರವಾಗೋಕ್ಕೆ ಈ ಎಡವಟ್ಟೇ ಭಗ್ನಪ್ರೀತಿ. ಈ ಭಗ್ನ ಪ್ರೇಮಿಗಳು ಕಳೆದ ಸಂತಸ ಕ್ಷಣಗಳನ್ನು ಮರೆಯಲು ಬಳಸುವ ಹಾದಿ ದುಶ್ಚಟಗಳ ರಹದಾರಿ ಇಲ್ಲೆ ಅಪಾಯವಾಗೋದು ಅಂತಹ ಗೆಳೆಯರು ತಮಗೆ ತಾವು ಒಂದು ಅವಕಾಶ ಕೊಟ್ಟುಕೊಂಡರೆ ಹೊಸ ಬದುಕು ಕಟ್ಟಿಕೊಂಡರೆ ಎಷ್ಟು ಚಂದವೆಂದು.

Please follow and like us:
error