ವೀರಣ್ಣ ನಿಂಗೋಜಿಯವರಿಗೆ ಕವಿಸಮಯದ ಅಭಿನಂದನೆ

ಕೊಪ್ಪಳ : ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ವೀರಣ್ಣ ನಿಂಗೋಜಿಯವರಿಗೆ ಕವಿಸಮಯ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.  ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರನ್ನು ಒಟ್ಟುಗೂಡಿಸಿಕೊಂಡು ಕನ್ನಡ ನಾಡು,ನುಡಿಗೆ ಅವರಿಂದ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದೆ. ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೦೩ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎನ್ .ಜಡೆಯಪ್ಪ- ಕಾರ‍್ಮಿಕ, ಚಂದ್ರು ಕನಕಗಿರಿ- ಸಾಮರಸ್ಯ ಸಾಯುತಿದೆ ಅಣ್ಣ, ಮೆಹಮೂದಮಿಯಾ- ಪವಿತ್ರ ಭಾವ,  ಬಸವರಾಜ ಸಂಕನಗೌಡರ – ಕನ್ನಡ ಶಾಯಿರು, ಪುಷ್ಪಾವತಿ ಎಂ- ಬದುಕು ಭಾವನೆಗಳ ಬಂಡಿ, ಸಿರಾಜ್ ಬಿಸರಳ್ಳಿ- ದಿ.ಬಾಬುಸಾಬ ಬಿಸರಳ್ಳಿಯವರ ಮೇ ಒಂದು, ಬಸವರಾಜ ಚೌಡ್ಕಿ-ಹೆಣ್ಣು, ಶ್ರೀನಿವಾಸ ಚಿತ್ರಗಾರ-ಕಾರ್ಮಿಕನ ಕೂಗು, ಶಾಂತಪ್ಪ ಬಡಿಗೇರ- ಹೊಸ ಯುಗದ ಮಹಾಪುರುಷ, ಶಿವಪ್ರಸಾದ ಹಾದಿಮನಿ-ಚುಟುಕು,ಶರಣಪ್ಪ ದಾನಕೈ-ಅಧಿಕಾರ ಕವನಗಳನ್ನು ವಾಚನ ಮಾಡಿದರು.
ಕಾರ‍್ಯಕ್ರಮದಲ್ಲಿ ಹನುಮಂತಪ್ಪ ಅಂಡಗಿ, ಶರಣಪ್ಪ ಹೊಸಳ್ಳಿ, ಸುದೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಬಸವರಾಜ್ ಸಂಕನಗೌಡರ ಸ್ವಾಗತ,ಶಿವಪ್ರಸಾದ ಹಾದಿಮನಿ ವಂದನಾರ್ಪಣೆ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಿರೂಪಿಸಿದರು.
Please follow and like us:
error