fbpx

ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ‘ಕಾಡಿನ ಹೂ’ ಬಿಡುಗಡೆ.

ಕೊಪ್ಪಳ-01- ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಡಾ.ಮಹಾಂತೇಶ ಮಲ್ಲನಗೌಡರ ಸಮಗ್ರ ಕಾವ್ಯ ಸಂಕಲನ,ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೨೭ನೇ ಕೃತಿ ‘ಕಾಡಿನ ಹೂ’ ಬುಡುಗಡೆ ಕಾರ್ಯಕ್ರಮವು ನಗರದ ಗವಿಶ್ರೀ ಬಡಾವಣೆಯ ಮೊದಲನೇಯ ವೃತ್ತದಲ್ಲಿರುವ ಮಲ್ಲಿಗೆ ನಿಲಯದಲ್ಲಿ ಜ.೦೩.ರ ರವಿವಾರದಂದು ಬೆಳಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
  ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ವಿಠ್ಠಲರಾವ್ ಗಾಯಕವಾಡರು ‘ಕಾಡಿನ ಹೂ’ ಬಿಡುಗಡೆಗೊಳಿಸಲಿದ್ದಾರೆ.ಕಲಬುರಗಿಯ ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ.ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಲಿದ್ದಾರೆ.
Please follow and like us:
error

Leave a Reply

error: Content is protected !!