ಜಲಾನಯನ ನಿರ್ವಹಣೆ ಗ್ರಾಮ ಸಭೆ

ದಿನಾಂಕ ೨೮-೦೨-೨೦೧೩ ರ ಗುರುವಾರದಂದು ಬೆಳಿಗ್ಗೆ ೯-೩೦ ಗಂಟೆಗೆ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಮಹಿಳಾ ಮತ್ತು ಪರಿಸರ ಅಭಿವೃಧ್ಧಿ ಸಂಸ್ಥೆ ಬಳ್ಳಾರಿ (ವೇಡ್ಸ) ಇವರ ಸಂಯೊಗದೊಂದಿಗೆ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಅರಿವು ಮೂಡಿಸಲು ಪೂರ್ವಸಿದ್ದತಾ ಹಂತವಾಗಿ ಗ್ರಾಮಸಭೆ ಏರ್ಪಡಿಸಲಾಯಿತು.                ಗ್ರಾಮಸಭೆಯು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಸಮಗ್ರ ಜಲಾನಯನ ನಿರ್ವಹಣೇ ಯೋಜನೆ ಯಶಸ್ವಿಯಾಗಲು ಸಮುದಾಯದ ಸಹಬಾಗಿತ್ವ ಅವಶ್ಯವಾಗಿದೆ. ಎಂದು ವೇಡ್ಸ ಸಂಸ್ಥೆಯ ನಿರ್ದೇಶಕರಾದ   ಚಕ್ರಪಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಾತನಾಡಿದ ನೋಡಲ್ ಅಧಿಕಾರಿಗಳಾದ   ಕೃಷ್ಣರೆಡ್ಡ್ಣಿ ಅವರು ಸಮಗ್ರ ಜಲಾನಯನ ಯೋಜನೆಯು ರೈತರಿಗೆ ವರದಾನವಾಗಿದ್ದು ಯೋಜನೆಯ ಪ್ರಯೋಜನೆಯನ್ನು ಪಡೆದುಕಳ್ಳಬೇಕೆಂದು ಸಲಹೆ ನೀಡಿದರು.   ವಿ.ಎಸ್.ಹಿರೇಮಠ ಸಹಾಯಕ ಕೃಷಿ ನಿರ್ದೇಶಕರು ಕೊಪ್ಪಳ ಇವರು ಯೋಜನೆಯ ಉದ್ದೇಶ ಹಾಗೂ ಗುರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.   ಆರ್.ಬಿ ಭೂತಾಳೆ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿಗಳು ಕೊಪ್ಪಳ ಅವರು ಅರಣ್ಯ ಸಸಿಗಳನ್ನು ಬೆಳೆಸುವುದರ ಬಗ್ಗೆ ವಿವರಿಸಿದರು. ಶ್ರೀಮತಿ ಜಯಶ್ರೀ ಕಳ್ಳಿಹಾಲ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕೊಪ್ಪಳ ಇವರು ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ   ರಾಮಣ್ಣ ಚೌಡಕಿ ಗ್ರಾಮ ಪಂಚಾಯತ ಆಧ್ಯಕ್ಷರು, ಲೇಬಗೇರಿ ಇವರು ಯೋಜನೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ರೈತರಿಗೆ ಕರೆ ನೀಡಿದರು. ಸಭೆಯಲ್ಲಿ ಕೃಷಿ ಅಧಿಕಾರಿಗಳಾದ  ಜಂಬಣ್ಣ ಎಸ್ ಐಲಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳಾದ   ಬಿ.ಎನ್ ಗೊಬ್ಬರಗುಂಪಿ,   ಎನ್ ವೈ.ಹಿರೇಹಾಳ ಸಭೆಯಲ್ಲಿ ಉಪಸ್ಥಿತರಿದ್ದು ರೈತರಿಗೆ ಮಾಹಿತಿ ನೀಡಿದರು. ಗ್ರಾಮದ ರೈತರು ಮಹಿಳೆಯರು ಗ್ರಾಮ ಪಂಚಾಯತ ಸದಸ್ಯರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.
ಸಭೆಯಲ್ಲಿ    ಲಾಯಪ್ಪ ನಂದ್ಯಾಳ ತಂಡದ ಮುಖ್ಯಸ್ಥರು ಸ್ವಾಗತಿಸಿದರು   ಬಸವರಾಜ ಅಂಗಡಿ ಕಾರ್ಯಕ್ರಮ ನಿರೂಪಿಸಿದರು ಕುಮಾರಿ ಪ್ರತಿಮಾ ವಂದಿಸಿದರು.

Please follow and like us:
error