fbpx

ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಂಘಟಿತರಾಗಲು ಕರೆ

ಕೊಪ್ಪಳ ವಿಧಾನ ಸಭಾ ಕ್ಷೇತ್ರದ CPI(ML)  ರೆಡ್ ಸ್ಟಾ

ರ ಪಕ್ಷದ ಅಭ್ಯರ್ಥಿಯಾದಂತಹ ಮಂಜುನಾಥ.ಈ. ಚಕ್ರಸಾಲಿ  ನೇತೃತ್ವದಲ್ಲಿ ಕೊಪ್ಪಳದ ಗದಗ ರಸ್ತೆಯ ಸರ್ಕಲ್‌ನಲ್ಲಿ ಪ್ರಚಾರ ಸಭೆ ನಡೆಸಲಾಯಿತು, ಮತದಾರರನ್ನು ಉದ್ದೇಶಿಸಿ ಮಾತನಾಡಿದ  ಮಂಜುನಾಥ. ಈ. ಚಕ್ರಸಾಲಿ ವಕೀಲರು ಇಂದು ಮೇ-೦೧-೨೦೧೩ರ ವಿಶ್ವ ಕಾರ್ಮಿಕರ ದಿನಾಚರಣೆ ಆದರೆ ನಮ್ಮ ಬಡವರು, ಕೂಲಿ ಕಾರ್ಮಿಕರು ದಿನಾಚರಣೆಯನ್ನು  ಮಾಡದಂತಹ ಬಡತನ ಸ್ಥಿತಿಯಲ್ಲಿರುವದರಿಂದ ಇಂದು ಈ ಸರ್ಕಲ್‌ನಲ್ಲಿ ಕಟ್ಟಡ ಕೆಲಸಕ್ಕಾಗಿ ಕಾಯುತ್ತಿರುವುದು ಈ ದೇಶದ ಹಸಿರು ಅಸಮಾನತೆಗೆ ದೊಡ್ಡ ನಿದರ್ಶನವಾಗಿದೆ.ಪ್ರತಿನಿತ್ಯ ಇಲ್ಲಿಗೆ ಬರುವ ಗ್ರಾಮೀಣ ಕಾರ್ಮಿಕರು ಕೆಲಸ ಸಿಗದಿದ್ದರೆ ಉಪವಾಸದಿಂದ ತೆರಳುವ ಕರುಣಾಜನಕ ಪರಸ್ಥಿತಿ ಈ ಜಿಲ್ಲೆಯಲ್ಲಿದೆ.  ಸರ್ಕಾರ ಚುನಾವಣೆಯ ದಿನದಂದು ವೇತನ ಸಹಿತ ರಜಾ ಘೊಷಿಸಿದೆ. ಆದರೆ ಹೊಟ್ಟೆಗೆ ಹಿಟ್ಟಿಲ್ಲದೆ ಬದುಕುತ್ತಿರುವ ಈ ಅಸಂಘಟಿತ ಕಾರ್ಮಿಕರ ಕುರಿತು  ಐತಿಹಾಸಿಕ ಮೇ ದಿನಾಚರಣೆ ದಿನದ ಕಾರ್ಯಕ್ರಮ ಹಮ್ಮಿಕೊಳ್ಳದೆ ಇರುವುದು ದೊಡ್ಡ ದುರಂತ. ಪ್ರಮುಖಪಕ್ಷಗಳಾದಂತಹ ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಪಕ್ಷಗಳು ಹಣ, ಬ್ರಾಂಡಿ, ವಿಸ್ಕಿಯ ಹೊಳೆಯನ್ನೆ ಹರಿಸುತ್ತಿದೆ. ಮತದಾರರು ಒಂದು ದಿನ ದುಡಿಯುವ ನೂರರಿಂದ ಎರಡು ನೂರು  ರೂ,ಗೆ ಮತವನ್ನು ಮಾರಿಕೊಳ್ಳದೆ ಭ್ರಷ್ಟರನ್ನು ತಿರಸ್ಕರಿಸಿ ನಮ್ಮ ಆಟೋ ಗುರುತಿಗೆ ತಮ್ಮ ಮತ ನೀಡಿ ಆರಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.                      

                        TUCI
  ರಾಜ್ಯಾದ್ಯಕ್ಷರಾದ ಕಾಂ|| ಡಿ.ಎಚ್. ಪೂಜಾರ್ ರವರು ಮಾತನಾಡಿ ಭಾರತೀಯ ಕಮುನಿಷ್ಟ ಪಕ್ಷವು ಹಲವು ದಶಕಗಳಿಂದ ದುಡಿಯುವ ಜನರ ವಿಮೋಚನೆಗಾಗಿ ಹೋರಾಡುತ್ತಿದೆ. ಜಿಲ್ಲೆಯ ನೆಲ-ಜಲವನ್ನು  ಲೂಟಿ ಮಾಡುವ, ಪರಿಸರವನ್ನು ಹಾಳು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಸೇವೆ ಮಾಡುತ್ತಿರುವ  ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಪಕ್ಷಗಳಿಗೆ ಜನರು ಸರಿಯಾಗಿ ಪಾಠ ಕಲಿಸಬೇಕಾಗಿದೆ. ಉದ್ಯೋಗ ಖಾತ್ರಿ ರಸ್ತೆ ನಿರ್ಮಾಣ ಇತರೆ ಅಭಿವೃಧ್ಧಿ ಯೋಜನೆಯಲಿ  ಲೂಟಿ ಮಾಡಿದ ನೂರಾರು ಕೋಟಿ ಹಣವನ್ನು ಈ ಪಕ್ಷಗಳು ಚುನಾವಣೆಯಲ್ಲಿ ಹಂಚುವದರೊಂದಿಗೆ ಮತದಾರರ ಸಾಂವಿಧಾನಿಕ  ಹಕ್ಕನ್ನು ಹರಣ ಮಾಡುತ್ತಿದ್ದಾರೆ, ಆದರೆ ಚುನಾವಣೆ ಆಯೋಗ ಮೇಲ್ನೋಟಕ್ಕೆ ಕಟ್ಟು ನಿಟ್ಟಿನ ನಿರ್ಭಂದನೆ ಹೇರಿದೆ ಎಂದು ತೋರಿದರೂ ಕೂಡ ಹಣ ಹಾಗೂ ಇತರ ಅಕ್ರಮ ಸಂಪನ್ಮೂಲಗಳನ್ನು ವಿತರಿಸುವ ಕಾರ್ಯ ಎಗ್ಗಿಲ್ಲದೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಯುವಜನರು , ರೈತ- ಕಾರ್ಮಿಕರು , ಪ್ರಗತಿಪರ ಚಿಂತಕರು ಈ ಅಕ್ರಮ ಹಂಚಿಕೆಯ ವಿರುಧ್ಧ ಹೋರಾಡುವದರೊಂದಿಗೆCPI(ML)      ರೆಡ್ ಸ್ಟಾರ್ ಪಕ್ಷದ ಅಭ್ಯರ್ಥಿಯಾದಂತಹ ಮಂಜುನಾಥ.ಈ.  ಚಕ್ರಸಾಲಿ ಯವರಿಗೆ ಮತ ನೀಡಿ ಭ್ರಷ್ಟಾಚಾರ ನಿರ್ಮೂಲನೆಗೆ ಅವಕಾಶ ಮಾಡಿಕೊಡಬೇಕೆಂದು  ಕರೆ ನೀಡಿದರು. 
                TUCI  ಿಲ್ಲಾಧ್ಯಕ್ಷರಾದ ಬಸವರಾಜ್ ನರೇಗಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಸಂಘಟಿತರಾಗಲು ಕರೆ ನೀಡಿದರು. ಸಂಘಟನಾ ಸಮಿತಿ ಸದಸ್ಯರಾದ ಆಸೀಫ ಅಲಿ ಅವರು ವಂದಿಸಿದರು.                       
Please follow and like us:
error

Leave a Reply

error: Content is protected !!