ನ್ಯೂ ಸ್ಟಾರ್ ಕರಾಟೆ ಕ್ಲಬ್‌ನಿಂದ ಕರಾಟೆ ಬೆಲ್ಟ್ ಪರೀಕ್ಷೆ

ಕೊಪ್ಪಳ,ಸೆ.೦೧: ನಗರದ ಗಡಿಯಾರ ಕಂಬದ ಹತ್ತಿರದ ಸಿ.ಪಿ.ಎಸ್. ಶಾಲೆಯ ಆವರಣದಲ್ಲಿ ಶನಿವಾರ ಸಂಜೆ ನ್ಯೂ ಸ್ಟಾರ್ ಕರಾಟೆ ಕ್ಲಬ್ ಆಯೋಜಿಸಿದ ಬೆಲ್ಟ್ ಪರೀಕ್ಷೆಯಲ್ಲಿ ೧೨ ಕರಾಟೆ ಪಟುಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿ ತೇರ್ಗಡೆಯಾಗಿದ್ದಾರೆ.
ಈ ಪರೀಕ್ಷೆಯನ್ನು ಶನಿವಾರ ಮಧ್ಯಾಹ್ನ ೧.೦೦ ರಿಂದ ೫.೦೦ ರವರೆಗೆ ಸುಮಾರು ೪ ಗಂಟೆಗಳ ಕಾಲ ನಿರಂತರ ಅಭ್ಯಾಸವನ್ನು ಮಾಡಿಸಿದ ಮುಖ್ಯ ಪರೀಕ್ಷಕ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಎಸ್.ವಿ. ಮತ್ತು ಹಿರಿಯ ತರಬೇತಿದಾರರಾದ ಶ್ರೀಕಾಂತ ಪಿ.ಕಲಾಲ್, ಶಂಕರ ಎ.ವಡ್ಡಟ್ಟಿ, ಕಿರಿಯ ತರಬೇತಿದಾರರಾದ ಚಿರಂಜೀವಿ ಹಾಗೂ ಶಾಂತವೀರ ಅವರು ಪರೀಕ್ಷೆ ನಡೆಸಿದರು.
ನಂತರ ಸಂಜೆ ೬.೦೦ ಗಂಟೆಗೆ ಬೆಲ್ಟ್ ವಿತರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು ಹಾಗೂ  ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ವಾಸುದೇವ ಅವರು ಕರಾಟೆ ಪಟು ರುಕ್ಮೀಣಿ ಇವರಿಗೆ ಕರಾಟೆ ಅಸ್ತ್ರವಾದ ನಾನ್‌ಚೆಕ್ ಕೊಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಪರೀಕ್ಷಕ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಎಸ್.ವಿ. ಮಾತನಾಡಿ, ಈ ಪರೀಕ್ಷೆಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಏರ್ಪಡಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಈ ಹಿಂದೆ ನಾಲ್ಕು ತಿಂಗಳ ತರಬೇತಿ ಪಡೆದಿದ್ದನ್ನು ಸಂಪೂರ್ಣವಾಗಿ ಪ್ರದರ್ಶಿಸಬೇಕು. ಇದನ್ನು ಪರಿಗಣಿಸಿ ಮುಂದಿನ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಈ ಆತ್ಮ ರಕ್ಷಣೆಯಾದ ಕರಾಟೆ ಕಲೆಯನ್ನು ಪ್ರತಿಯೊಬ್ಬರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ಉಪಯೋಗವಾಗುತ್ತದೆ ಎಂದು ತಿಳಿಸಿದರು. ನಂತರ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು ಮಾತನಾಡಿ, ಇಂದಿನ ದಿನಗಳಲ್ಲಿ ಕರಾಟೆ ತರಗತಿ ಮಹಿಳೆಯರಿಗೆ ಅತಿ ಅವಶ್ಯಕವಾಗಿದ್ದು, ಯಾಕೆಂದರೇ ದೇಶದಲ್ಲಿ ಹಿಂಸೆ, ಅತ್ಯಾಚಾರ, ದೌರ್ಜನ್ಯ ಇನ್ನೂ ಅನೇಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಕರಾಟೆ ಕಲಿತರೆ ದೈರ್ಯದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ರಾಜ್ಯದಲ್ಲಿ ಪ್ರತಿ ಸರಕಾರಿ/ಖಾಸಗಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಡೈಮಂಡ್ ಜೀಮ್‌ನ ತರಬೇತಿದಾರ ಬಾಬಾ, ಶಿಕ್ಷಕರಾದ ಸುರೇಶ, ಮೌನೇಶ ಎಸ್.ವಿ., ಶ್ರೀಕಾಂತ, ಶಂಕರ, ಚಿರಂಜೀವಿ, ಶಾಂತವೀರ, ಫಯಾಜ್ ಯತ್ನಟ್ಟಿ ಸೇರಿದಂತೆ ಕರಾಟೆ ಪಟುಗಳ ಪಾಲಕರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ೧೨ ಕರಾಟೆಪಟುಗಳಿಗೆ ಬೆಲ್ಟ್ ವಿತರಿಸಲಾಯಿತು. 

Leave a Reply