ಬಿ.ಜೆ.ಪಿ. ಪಕ್ಷ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಕೊಪ್ಪಳ-15- ಹಿರೇಸಿಂದೋಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅನೇಕ ಬಿ.ಜೆ.ಪಿ.ನಾಯಕರು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಒಪ್ಪಿಕೊಂಡು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರ ನೇತೃತ್ವದಲ್ಲಿ ಪ್ರತಾಪರೆಡ್ಡಿ ಮಾದಿನೂರು, ತಿಮ್ಮರೆಡ್ಡಿ ಮೂಲಿಮನಿ, ಯಂಕನಗೌಡ ಮಾಲಿಪಾಟೀಲ, ರಾಮಣ್ಣ ಹೂಗಾರ, ವಿಶ್ವಕರ್ಮ ಸಮಾಜದ ಯುವಮುಖಂಡ ಪ್ರಭು ಕಮ್ಮಾರ ಹಾಗೂ ಅವರ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಹೆಚ್.ಎಲ್.ಹಿರೇಗೌಡ್ರು, ಈಶಪ್ಪ ಮಾದಿನೂರು, ಹನುಮರೆಡ್ಡಿ ಹಂಗನಕಟ್ಟಿ, ಕೇಶವರೆಡ್ಡಿ, ಖಾಟನಪಾಷಾ, ಸಿದ್ದು ಮ್ಯಾಗೇರಿ, ಶ್ರೀಮತಿ ಇಂದಿರಾಭಾವಿ ಕಟ್ಟಿ, ನೂರಜಾನಬೇಗಂ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error