ಹಾಲ್ಕುರಿಕೆ ಥಿಯೇಟರ್ : ರಾಜ್ಯ ಮಟ್ಟದ ಆರು ತಿಂಗಳ ಅಭಿನಯ ಶಿಬಿರ

 ರಂಗ ಶಿಬಿರ  ಕನ್ನಡ ರಂಗಭೂಮಿಯನ್ನು ಬೌದ್ಧಿಕ ನೆಲೆಯಲ್ಲಿ ಪ್ರಯೋಗಗೊಳಿಸುತ್ತಾ ಬರುತ್ತಿರುವ ಹಾಲ್ಕುರಿಕೆ ಥಿಯೇಟರ್ ನಟನೆಯನ್ನೇ ಮುಖ್ಯ ಜೀವಾಳವಾಗಿಸಿಕೊಂಡು ನಟನೆಯ ವಿವಿದ ಆಯಾಮಗಳ ಶೋಧನೆಗಾಗಿ ಶೂನ್ಯ ಪರಿಕಲ್ಪನೆಯ ಅಧುನಿಕ ಅಭಿನಯ ಸಿದ್ಧಾಂತವನ್ನು  ಆವಿಷ್ಕಕರಿಸುತ್ತಾ ಭಾರತೀಯ ರಂಭೂಮಿಯಲ್ಲೇ ಭಿನ್ನ ಮಾದರಿಯನ್ನು ಹಿಡಿದು ಹೊಸಹೊಸ ರಂಗ ಸಾಧ್ಯತೆಗಳನ್ನು ಹುಡುಕುತ್ತಿರುವ ಹಾಲ್ಕುರಿಕೆ ಥಿಯೇಟರ್ ಕೊಪ್ಪಳ ತಾಲೋಕಿನ ಬೂದಗುಂಪಾದಲ್ಲಿ ರಾಜ್ಯ ಮಟ್ಟದ  ಆರು ತಿಂಗಳ ಅಭಿನಯ ಶಿಬಿರವನ್ನು ಅಯೋಜಿಸಿದೆ.ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಶಿಬಿರದಲ್ಲಿ ರಂಗ ನಟನೆಯ ತಾತ್ವೀಕತೆ  ಪ್ರಯೋಗಿಕ ನೆಲೆಗಳನ್ನು ಮತ್ತು ರಂಗಭೂಮಿಯ ವಿಸ್ತೃತತೆಯನ್ನು ಕಲಿಸಿಕೊಡುತ್ತಾರೆ .ಶಿಬಿರದ ನಂತರ ಪ್ರತಿಭಾವಂತ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಹಾಲ್ಕುರಿಕೆ ಥಿಯೇಟರ್ ಪ್ರತಿ ವರ್ಷ ನಡೆಸುವ ಕಾಲೇಜು ರಂಗ ಪಯಣದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು. 

ಹೆಚ್ಚಿನ ವಿವಿರಕ್ಕಾಗಿ ಸಂಪರ್ಕಿಸಿ ೯೮೪೪೯೦೪೪೩೪,೭೪೦೬೨೨೪೦೦೨
Please follow and like us:
error