ಫ್ಯಾಶನ್ ಟೆಕ್ನಾಲಜಿ ಉಚಿತ ತರಬೇತಿ : ಅರ್ಜಿ ಆಹ್ವಾನ

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳಿಗೆ ನ್ಯಾಷನಲ್ ಇನ್‌ಸ್ಟೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಬೆಂಗಳೂರು ಇಲ್ಲಿ ಫ್ಯಾಶನ್ ಟೆಕ್ನಾಲಜಿ ಸಂಬಂಧಿಸಿದಂತೆ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಹಾಗೂ ಇಂಡಸ್ಟ್ರೀಯಲ್ ಪ್ಯಾಟರ್ನ್ ಮೇಕಿಂಗ್ ವಿಷಯದಲ್ಲಿ ಉಚಿತ ತರಬೇತಿಯನ್ನು ಏರ್ಪಡಿಸಲಾಗಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಅ.೧೫ ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ www.backwardclasses.kar.nic.in
 
ನ್ನು ವೀಕ್ಷಿಸಬಹುದಾಗಿದೆ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್  ತಿಳಿಸಿದ್ದಾರೆ. 
Please follow and like us:
error