Bjp Bike Rally ಬೈಕ್ ರ‍್ಯಾಲಿ

ಕೃಷ್ಣಾ ಬೀ ಸ್ಕೀಮ್ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆಗಳಿಗೆ ಅತೀ ಶೀಘ್ರದಲ್ಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಿ ಇಂದು ಬಿಜೆಪಿ ಕಾರ್ಯಕರ್ತರು ಸುಮಾರು ೨೫ ಕಿಲೋ ಮಿಟರ್ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಡೆಸಿದರು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಿಂದ ಆರಂಭವಾದ ಬೈಕ್ ರ‍್ಯಾಲಿ ಕುಕನೂರು ಗ್ರಾಮದ ವರೆಗೆ ಬೈಕ್ ರ‍್ಯಾಲಿ ನಡೆಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಇನ್ನು ಇದೇ ೨೦ ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕುಷ್ಟಗಿ ಪಟ್ಟಣದಲ್ಲಿ ಬ್ರಹತ್ ಸಮಾವೇಶವನ್ನು ಕೂಡಾ ಹಮ್ಮಿಕೋಳ್ಳಲಾಗಿದೆ. ರಾಜ್ಯ ಸರ್ಕಾರದ ದುರಾಡಳಿತದ ಕುರಿತು ಸಾರ್ವಜನಿಕರಿಗೆ ತಿಳಿಸಲು ಹಾಗೂ ಕೃಷ್ಣಾ ಬೀ ಸ್ಕೀಮ್ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆಗಳಿಗೆ ಅತೀ ಶೀಘ್ರದಲ್ಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಿ ಈ ಬ್ರಹತ್ ಸಮಾವೇಶ ಹಮ್ಮಿಕೋಳ್ಳಲಾಗಿದೆ. ಇನ್ನು ಈ ಸಮಾವೇಶದ ಕುರಿತು ಜನರಲ್ಲಿ ಜಾಗ್ರತಿ ಮೂಡಲಿ ಎಂಬ ಕಾರಣಕ್ಕೆ ಈ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು…