fbpx

Aidyo ವತಿಯಿಂದ ಕ್ರಾಂತಿಕಾರಿ ಹೋರಾಟಗಾರರ‌ ಪುಸಕಗಳ ಮಾರಾಟ ತ

ರಾಜಿರಹಿತ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳ ಮಾರಾಟ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 71 ವರ್ಷಗಳು ಸಂದಿವೆ. ಬ್ರೀಟಿಷ್ ಸಾಮ್ರಾಜ್ಯಶಾಹಿಗಳನ್ನು ಇಲ್ಲಿಂದ ಹೊರಗಟ್ಟಿ ಸ್ವತಂತ್ರ್ಯ ತಂದುಕೊಟ್ಟವರು ಶ್ರಮಿಕರು, ವಿದ್ಯಾರ್ಥಿಗಳು, ಯುವಜನರು, ಬಡವರು, ಮದ್ಯಮವರ್ಗದವರು. ಆದರೆ ಅಧಿಕಾರ ಹಿಡಿದದ್ದು ಬಂಡವಾಳಶಾಹಿಗಳು.ಮತ್ತೊಮ್ಮೆ ಜನತೆ ನಮ್ಮವರಿಂದಲೆ ಶೋಷಿಸಲ್ಪಡುತ್ತಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿರುವ ಜನತೆ ಗೌgವÀಯುತ ಜೀವನಕ್ಕಾಗಿ ನ್ಯಾಯಯುತ ಹೋರಾಟಗಳನ್ನು ಕಟ್ಟಿದರೆ ಇಂದಿನ ಆಳ್ವಿಕರು ಪ್ರಜಾತಾಂತ್ರಿಕ ನೀತಿಗಳನ್ನು ಬದಿಗೊತ್ತಿ ನೀರ್ದಯವಾಗಿ ಅವುಗಳನ್ನು ಹತ್ತಿಕುತ್ತಿದ್ದಾರೆ. ಹಾಗಾಗಿ ಬಂಡವಾಳಶಾಹಿಗಳ ಶೋಷಣೆಯಿಂದ ಮುಕ್ತಿ ಪಡೆಯಲು ಶೋಷಿತರೆಲ್ಲರು ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಸಜ್ಜಾಗಬೇಕು.
ನಮ್ಮ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ನಾಯಕರಾದ ಶಹೀದ್ ಭಗತ್ ಸಿಂಗ್, ನೇತಾಜಿ ಶುಭಾಷ್ ಚಂದ್ರ ಬೋಸ್ ಅವರ ಕನಸು ಎಲ್ಲಾ ಜನರು ನೆಮ್ಮದಿಯಿಂದ ಸಂತೋಷದಿಂದ ಬದುಕಬೇಕೆಂಬುದಾಗಿತ್ತು. ಆದರೆ ಇಂದಿಗೂ ಸಹ ಕೋಟ್ಯಾಂತರ ಜನರು ಹಸವಿನಿಂದ ಸಾಯಿತ್ತಿದ್ದಾರೆ, ಮಹಿಳೆಯರ ಮೇಲೆ ದೌಜ್ರ್ಯನ್ನಗಳು, ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ, ಉದ್ಯೋಗದ ಭದ್ರತೆ ಇಲ್ಲದೆ ಯುವಜನರು ದಿಕ್ಕಾಪಾಲಾಗುತ್ತಿದ್ದಾರೆ ಹಾಗು ಅವರನ್ನು ನೈತಿಕವಾಗಿ ಹಾಳುಮಾಡಲಾಗುತ್ತಿದೆ. ದಲಿತರು ಹಾಗು ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ.ಇಂತಹ ಸನ್ನಿವೇಶದಲ್ಲಿ ನಮ್ಮ ದೇಶ ನಮ್ಮ ರಾಷ್ಟ್ರವೆಂದು ಹೆಮ್ಮೆ ಪಡುವವರು ನಮಗೆ ಬಂದಿರುವ ಸ್ವಾತಂತ್ರ್ಯ ಎಂತಹದು ಎಂದು ಯೋಚಿಸಬೇಕಾಗಿದೆ.
ಅನ್ಯಾಯವನ್ನು ಪ್ರಶ್ನೆ ಮಾಡುವಂತಹ ಯುವಜನರಿಗೆ ನೈತಿಕವಾಗಿ, ಸಾಂಸ್ಕøತಿಕವಾಗಿ ಇಂದಿನ ವ್ಯವಸ್ಥೆ ಅವರನ್ನು ಹಾಳುಮಾಡಿದೆ. ಪ್ರಸ್ತುತ ಸಂದರ್ಭದಲ್ಲಿ ಯುವಜನರು ಆದರ್ಶ ಬೇರಿಲ್ಲದಂತಾಗಿದ್ದಾರೆ. ಆದ್ದರಿಂದ ನಮ್ಮ ಸಂಘಟನೆ ವಿದ್ಯಾರ್ಥಿಗಳ, ಯುವಜನರ, ಮಹಿಳೆಯರ ಎದುರಿಸುವಂತಹ ಸಮಸ್ಯೆಗಳ ಕುರಿತು ಹೋರಾಟ ದೇಶವ್ಯಾಪಿ ಕಟ್ಟುತ್ತಾ ಬರುತ್ತಿದೆ. ಇದರ ಭಾಗವಾಗಿ ಕೊಪ್ಪಳದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕ್ರಾಂತಿಕಾರಿಗಳ ಹಲವಾರು ಪುಸ್ತಕಗಳನ್ನು ಮಾರಾಟ ಮಾಡಲಾಯಿತು. ಜನರು ಎಲ್ಲಾ ಕ್ರಾಂತಿಕಾರಿಗಳ ಪುಸ್ತಕಗಳನ್ನು ಆಸಕ್ತಿಯಿಂದ ಖರೀದಿಸಿದರು

Please follow and like us:
error
error: Content is protected !!