ಭಾರತ ಮಾರ್ಕ್ಸವಾದಿ ಲೆನಿನವಾದಿ ಪಕ್ಷದ (ರೆಡ್‌ಪ್ಲ್ಯಾಗ್) ಅಭ್ಯರ್ಥಿ ಪ್ರಚಾರ

ಕೊಪ್ಪಳ: ಇಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಭಾರತ ಮಾರ್ಕ್ಸವಾದಿ ಲೆನಿನವಾದಿ ಪಕ್ಷದ (ರೆಡ್‌ಪ್ಲ್ಯಾಗ್) ಅಭ್ಯರ್ಥಿಯಾದ ಕಾಮ್ರೇಡ್ ಬಿ. ಬಸವಲಿಂಗಪ್ಪ ಇವರ ಟ್ಯಾಕ್ಟರ್ ಓಡಿಸುತ್ತಿರುವ ರೈತ ಗುರುತಿಗೆ ನಿಮ್ಮ ಮತ ನೀಡಿ ಎಂದು ಕೊಪ್ಪಳ ನಗರದ ಗಂಜ್ ಸರ್ಕಲ್, ಗಡಿಯಾರ ಕಂಬ, ಮತ್ತು ಬಸ್ಸ ನಿಲ್ದಾಣ ಹತ್ತಿರ ಪಕ್ಷದ ಕಾರ್ಯಕರ್ತರು ಪ್ರಚಾರ ಮಾಡಿದರು. ಅಭ್ಯರ್ಥಿಯಾದ ಕಾಮ್ರೇಡ್ ಬಿ. ಬಸವಲಿಂಗಪ್ಪ, ಬಸವರಾಜ ಎಕ್ಕಿ, ಮತದಾರರನ್ನು ಉದ್ಧೇಶಿಸಿ ಜನ ವಿರೋದಿ ಮೋದಿ ಸರಕಾರ ಕಿತ್ತಿ ಏಸೆಯಲು ಕಾಂಗ್ರೇಸ್ಸಿನ ಕಪಟ ರಾಜಕಾರಣವನ್ನು ದಿಕ್ಕರಿಸಲು ಜನರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಚಂದುಸಾಬ, ಶರಣಪ್ಪ ಸಾಲಿ, ಅಜಯ, ಬಸವರಾಜ ನೆರೆಗಲ್ ಇತರರು ಇದ್ದರು.

Related posts