95 ಕೇಜಿ ಗಾಂಜಾ ವಶ

  ಕೊಪ್ಪಳ ಜಿಲ್ಲೆಯ ಕ್ಯಾದಿಗುಪ್ಪಾ ಮಾರ್ಗವಾಗಿ ಸ್ವಿಪ್ಟ್ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 95 ಕೇಜಿ ಗಾಂಜಾವನ್ನು ವಶಪಡಿಸಿಕೊಂಡು  ಮೂವರು ಆರೋಪಿಗಳನ್ನು ಬಂದಿಸಿದ್ದಾರೆ.  ಬಾಗಲಕೋಟೆಯ ಮೂಲಕ ಬಳ್ಳಾರಿಗೆ ಗಾಂಜಾ  ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಾಗಿಸಲಾಗುತ್ತಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

   ಗಾಂಜಾ ಸಾಗಿಸಲು ಬಳಸಲಾಗಿದ್ದ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಗಾಂಜಾದ ಬೆಲೆ 9,50 ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ರೋಹಿಣಿ ಸೆಪಟ್ ತಿಳಿಸಿದ್ದಾರೆ. 

Leave a Reply