fbpx

ಕಂದಾಯ ಗ್ರಾಮವಾಗಿ 75 ತಾಂಡಾ ಪರಿವರ್ತನೆ

ಬೆಂಗಳೂರು, ಮಾರ್ಚ್ 25, : ರಾಜ್ಯಾದ್ಯಂತ ಒಟ್ಟು 75 ತಾಂಡಾಗಳನ್ನು ಕಂದಾಯಗ್ರಾಮಗಳಾಗಿ ಪರಿವರ್ತನೆ ಮಾಡಲು ಸರ್ಕಾರ ಗುರಿ ಹೊಂದಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ವಿಧಾನ ವಿಧಾನ ಪರಿಷತ್ತಿನಲ್ಲಿಂದು ಸ್ವಷ್ಟಪಡಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿಯೇ ನಮ್ಮ ಸರ್ಕಾರವು ತಾಂಡಾ, ಗೊಲ್ಲರಹಟ್ಟಿ ಹಾಗೂ ಇತರ ಹ್ಯಾಮ್ಲೆಟ್‍ಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಅದರಂತೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರವೇ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಸದಸ್ಯ ಎನ್. ಎಸ್. ಬೋಸರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
50 ಹಾಗೂ ಅದಕ್ಕಿಂತ ಹೆಚ್ಚು ಕುಟುಂಬಗಳು ಮತ್ತು 250ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ರಚಿಸಲು ಷರತ್ತನ್ನು ವಿಧಿಸಲಾಗಿತ್ತು ಸರ್ಕಾರಿ ಜಮೀನುಗಳಲ್ಲಿ ಇರುವಂತಹ ತಾಂಡಾಗಳ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ. ಸರ್ಕಾರಿ ಜಮೀನಿನಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಯಾವುದೇ ತೊಡಕು ಉಂಟಾಗುತ್ತಿಲ್ಲ. ಆದರೆ ಅರಣ್ಯ ಪ್ರದೇಶ ಮತ್ತು ಹಿಡುವಳಿದಾರರ ಪ್ರದೇಶಗಳಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕಾನೂನಿನಲ್ಲಿ ಕೆಲವು ತೊಡಕುಗಳುಂಟಾಗಿದೆ ಕಾನೂನಿಗೆ ಕೆಲವು ತಿದ್ದುಪಡಿಯನ್ನು ತರಬೇಕಿದೆ ಎಂದರು.
ನರಸಿಂಹಯ್ಯ ವರದಿ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸುವ ಸಲುವಾಗಿ ಅಧಿಕಾರಿಗಳ ತಂಡವನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.
Please follow and like us:
error

Leave a Reply

error: Content is protected !!