ಒಟ್ಟಿನಲ್ಲಿ ಮುಗಿಯಿತು 73% ಮತದಾನ

ಕೊಪ್ಪಳ : ಜಿಲ್ಲೆಯ 130 ಗ್ರಾಮ ಪಂಚಾಯತಿಯ 2310 ಸದಸ್ಯರ ಆಯ್ಕೆಗಾಗಿ ಇಂದು ನಡೆದ ಮತದಾನದಲ್ಲಿ ಕೆಲವೆಡೆ ಅಭ್ಯರ್ಥಿಗಳ ಮತ್ತು ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದ ಘಟನೆಗಳು ವರದಿಯಾಗಿವೆ. ಕೊನೆಯ ಕ್ಷಣದವರೆಗೂ ಅಭ್ಯರ್ಥಿಗಳು ಮತದಾರರು ಕೈಕಾಲು ಬೀಳುತ್ತಿದ್ದರು. ಅವರ ಜೇಬಿನಲ್ಲಿ ಗರಿ ಗರಿ ನೋಟು ತುರುಕುತ್ತಿದ್ದುದು ಸಾಮಾನ್ಯವಾಗಿತ್ತು. ಕೊಪ್ಪಳತಾಲೂಕು ಚಿಕ್ಕಸಿಂದೋಗಿಯಲ್ಲಿ ಚುನಾವಣಾ ಚಿಹ್ನೆಯ ಅದಲು-ಬದಲು ಗೊಂದಲದಿಂದಾಗಿ ಮತದಾನ ಸ್ಥಗಿತಗೊಂಡಿತು. ಚುನಾವಣಾ ಸಿಬ್ಬಂದಿಗಳು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಯಿತು.ನಂತರ ಸರಿಯಾದ ಬ್ಯಾಲೆಟ್ ಪೇಪರ್ ಒದಗಿಸಿ ಮತದಾನ ಮುಂದುವರೆಸಲಾಯಿತು. ಕುಷ್ಟಗಿ ಮುಂತಾದ ಕಡೆಯಲ್ಲಿ ಮತಪತ್ರಗಳು ಸಕಾಲಕಕ್ಕೆ ತಲುಪದ್ದರಿಂದ ನಾಲ್ಕು ಗಂಟೆ ತಡವಾಗಿ ಮತದಾನ ಆರಂಭವಾಯಿತು. ತಡವಾಗಿ ಮತದಾನ ಆರಂಭಿಸಿದ್ದಕ್ಕೆ ಜನರು ಪ್ರತಿಭಟನೆ ತೋರಿದರಾದರೂ ನಂತರ ಶಾಂತಯುತವಾಗಿ ಮತದಾನ ನಡೆಯಿತು. ಕುಕನೂರಿನಲ್ಲಿ ಮತಪತ್ರಗಳು ಕಡಿಮೆ ಯಾದ ಕಾರಣ ಮತದಾನ ಸ್ಥಗಿತಗೊಂಡಿತ್ತು. ಈ ಸಲದ ಚುನಾವನೆಯಲ್ಲಿ ಅತೀ ಹೆಚ್ಚು ದುಡ್ಡು ಮತ್ತು ಬಂಗಾರವನ್ನು ಹಂಚಿದ ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ಭಾಗ್ಯನಗರದಲ್ಲಿ ಓಟಿಗೆ ಇಷ್ಟು ಎಂದು ಫಿಕ್ಸ್ ಮಾಡಿದ್ದರ ಜೊತೆ ಜೊತೆಗೆ ಮೂಗಬೊಟ್ಟು, ಕರಿಮಣಿ ಗುಂಡು ಮತ್ತಿತರ ವಸ್ತುಗಳನ್ನು ಹಂಚಲಾಗಿದೆ. ಮತದಾರನ್ನು ಸೆಳೆಯಲು ಊ ಟದ ವ್ಯವಸ್ಥೆ, ಗುಂಡಿನ ವ್ಯವಸ್ಥೆಯಂತೂ ನಡೆದೇ ಇತ್ತು

Leave a Reply