fbpx

ಸಕಾಲ ಯೋಜನೆಯಡಿ 7.07 ಕೋಟಿ ಅರ್ಜಿ ಇತ್ಯರ್ಥ – ಟಿ.ಬಿ. ಜಯಚಂದ್ರ

ಬೆಂಗಳೂರು, ಮಾರ್ಚ್ 5 :ಸಕಾಲ ಸೇವೆಯಡಿ ಈವರೆಗೆ ಏಳು ಕೋಟಿಗೂ ಹೆಚ್ಚಿನ ಅರ್ಜಿ ಸಲ್ಲಿಸಿದ ನಾಗÀರಿಕರಿಗೆ ನಿಗದಿತ ಸಮಯದಲ್ಲಿ ಸೇವೆಗಳನ್ನು ಒದಗಿಸಲಾಗಿದೆ ಎಂದು ಕಾನೂನು ಸಚಿವ  ಟಿ. ಬಿ. ಜಯಚಂದ್ರ ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು (ಸೆಪ್ಟೆಂಬರ್ ನಿಂದ ಡಿಸೆಂಬರ್‍ವರೆಗೆ) ನಾಲ್ಕು ತಿಂಗಳುಗಳ ಸಕಾಲ ಸೇವೆಗಳ ವರದಿ ಬಿಡುಗಡೆಮಾಡಿ ಮಾತನಾಡಿದ ಸಚಿವರು 2015 ರ ಮಾರ್ಚ್ ತಿಂಗಳ 4ನೇ ತಾರೀಖಿನವರೆಗೆ ಒಟ್ಟು 7,14,75,226 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 7,07,14,531 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು. 
ಸಕಾಲ ಯೋಜನೆಯಡಿ 50 ಇಲಾಖೆಗಳಲ್ಲಿನ 669 ಸೇವೆಗಳನ್ನು ಜನಸಾಮಾನ್ಯರಿಗೆ ಒದಗಿಸಲಾಗುತ್ತಿದೆ ಎಂದ ಸಚಿವ ಜಯಚಂದ್ರ ಅವರು ಸಕಾಲ ಮಿಷನ್‍ನಲ್ಲಿ ಅತೀ ಅವÀಶ್ಯವಿರುವ ನಾಗರಿಕ ಕೇಂದ್ರದ ಹೆಚ್ಚುವರಿ ಸೇವೆಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೇ 100 ರಷ್ಟು ಗುರಿ ಸಾಧಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಸಕಾಲ ಯೋಜನೆಯಡಿ 135 ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸಲಾಗುತ್ತಿದೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಕಾಲ ಟಚ್ ಸ್ಕ್ರೀನ್ ಕಿಯೋಸ್ಕ್‍ಗಳನ್ನು ಅಳವಡಿಸಲಾಗಿದ್ದು, ಇದರಿಂದ ನಾಗರೀಕರು ಸಕಾಲ ಸೇವೆಗಳ ಕುರಿತು ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.
2014 ರ ಜುಲೈನಿಂದ ಡಿಸೆಂಬರ್‍ವರೆಎ ಸರಾಸರಿ ಮಾಸಿಕ ಅರ್ಜಿ ಸ್ವೀಕೃತಿ ಹಾಗೂ ವಿಲೇವಾರಿಯು ಸುಮಾರು 24 ಲಕ್ಷದಷ್ಟು ಇದ್ದು 2014 ರ ಜನವರಿಯಿಂದ ಜೂನ್‍ವರೆಗೆ ಸರಾಸರಿ ಮಾಸಿಕ ಸ್ವೀಕೃತಿ 19 ಲಕ್ಷಕ್ಕೆ ಹೋಲಿಸಿದರೆ ಉತ್ತಮ ಪ್ರಗತಿಯಾಗಿದೆ. ಇದು ಸಕಾಲ ಸೇವೆಗಳನ್ನು ಪಡೆದುಕೊಳ್ಳುವ ನಾಗರಿಕರ ಸಂಖ್ಯೆಯಲ್ಲಿ ಹೆಚ್ಚು ಪ್ರಗತಿಯಾಗಿರುವುದನ್ನು ಸೂಚಿಸುತ್ತದೆ ಎಂದು ಸಚಿವರು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯು ಸಕಾಲ ಸೇವೆ ನೀಡುವಲ್ಲಿ ಕಳೆದ 11 ತಿಂಗಳಿನಿಂದ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದು ಕಳೆದ ಏಳು ತಿಂಗಳಿನಿಂದ ತುಮಕೂರು ಜಿಲ್ಲೆಯು ದ್ವಿತೀಯ ಸ್ಥಾನವನ್ನು ಕಾದಿದೆ. 2014 ರ ಡಿಸೆಂಬರ್ ಅಂತ್ಯಕ್ಕೆ ಒಟ್ಟು 591 ಪ್ರಕರಣಗಳಲ್ಲಿ ನಾಗರಿಕರಿಗೆ ರೂ. 73,560 ಪರಿಹಾರ ಧನ ರೂಪದಲ್ಲಿ ಹಣ ಪಾವತಿ ಮಾಡಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
Please follow and like us:
error

Leave a Reply

error: Content is protected !!