ಮಡೆಸ್ನಾನ ಬಹಿರಂಗ ಚರ್ಚೆ ಜ.7 ರಂದು

 ಜ.7 ರಂದು ಮಡೆಸ್ನಾನ ಸ್ವಾಮೀಜಿಗಳ ಬಿಗ್ ಫೈಟ್
ಬೆಂಗಳೂರು: ನಾನು ಯಾವ ಪದ್ಧತಿ ಪರವೂ ಇಲ್ಲ ವಿರೋಧವಾಗಿಯೂ ಇಲ್ಲ. ಸಾಣೇಹಳ್ಳಿ ಶ್ರೀಗಳು ಚರ್ಚೆಗೆ ಬರಲಿ,ನಿಡುಮಾಮಿಡಿ ಶ್ರೀಗಳು ಚರ್ಚೆಗೆ ಬರಲಿ.ಜನತೆ ಮುಂದೆ ನನ್ನ ಅಭಿಪ್ರಾಯವನ್ನು ಮುಂದಿಡುತ್ತೇನ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಡೆಸ್ನಾನದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಪೇಜಾವರ ಸ್ವಾಮೀಜಿ ಹಾಕಿರುವ ಸವಾಲನ್ನು ಸ್ವೀಕರಿಸುವುದಾಗಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ ನಂತರ ಪೇಜಾವರಶ್ರೀಗಳು ಮಾಧ್ಯಮಗಳಿಗೆ ಭಾನುವಾರ ಪ್ರತ್ರಿಕ್ರಿಯೆ ನೀಡಿದರು.
ನಿಡುಮಾಮಿಡಿ ಪೀಠದ ವತಿಯಿಂದ ಬರುವ ಜನವರಿ 7ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಶಿಕ್ಷಕರ ಸದನದಲ್ಲಿ ’ಮಡೆಸ್ನಾನ ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಲು’ ಕರ್ನಾಟಕದ ವಿವಿಧ ಸಮುದಾಯಗಳ ಪ್ರಗತಿಪರ ಚಿಂತನೆಯ ಇಪ್ಪತ್ತೈದು ಮಠಾಧೀಶರು ಭಾಗವಹಿಸುವ ಸಮಾರಂಭ ಏರ್ಪಡಿಸಲಾಗಿದೆ.
ಪೇಜಾವರ ಶ್ರೀಗಳು ದೊಡ್ಡ ಮನಸ್ಸು ಮಾಡಿ ಈ ಸಮಾರಂಭಕ್ಕೆ ಆಗಮಿಸಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಮತ್ತು ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದು ನಿಡುಮಾಮಿಡಿ ಸ್ವಾಮೀಜಿ ತಿಳಿಸಿದ್ದರು.
Please follow and like us:
error