ಸಿಂದಗಿ: ತಹಶೀಲ್ದಾರ್ ಕಚೇರಿಯ ಮೇಲೆ ಪಾಕ್ ಧ್ವಜ ಹಾರಾಟ; ಶ್ರೀರಾಮ ಸೇನೆಯ 7 ಮಂದಿ ಕಾರ್ಯಕರ್ತರ ಬಂಧನ

ಸಿಂದಗಿ, ಜ.4: ಸಿಂದಗಿ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯ ಆವರಣದ ಧ್ವಜ ಸ್ತಂಭದ ಮೇಲೆ ಪಾಕ್ ಧ್ವಜವನ್ನು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಘಟನೆಗೆ ಸಂಬಂಧಿಸಿ ಮಲ್ಲನ ಗೌಡ ಪಾಟೀಲ್, ಪರಶುರಾಮ ವಾಗ್ಮೋರೆ, ಸುನೀಲ್, ರಾಕೇಶ್ ಸಿದ್ದರಾಮಯ್ಯ ಮಠ, ರೋಹಿತ್ ಅಗಸರ, ಅನಿಲ್ ಸೋಲಂಕರ್ ಹಾಗೂ ರೋಹಿತ್ ನಾವಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರೆಲ್ಲ ಶ್ರೀರಾಮ ಸೇನೆಯ ಕಾರ್ಯಕರ್ತರಾಗಿದ್ದು, ಸಮಾಜದ ಶಾಂತಿ-ಸೌಹಾರ್ದವನ್ನು ಕೆಡಿಸುವ ಉದ್ದೇಶದಿಂದ ಈ ದುಷ್ಕೃತ್ಯವೆಸಗಿದ್ದಾರೆ ಎಂದು ಎಸ್ಪಿ ಡಿ.ಸಿ.ರಾಜಪ್ಪ ತಿಳಿಸಿದರು.
ಕಳೆದ ರವಿವಾರ(ಜ.1)ದಂದು ಈ ದುಷ್ಕರ್ಮಿಗಳು ಸಿಂದಗಿ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯ ಆವರಣದ ಧ್ವಜಸ್ತಂಭದ ಮೇಲೆ ಪಾಕ್ ಧ್ವಜವನ್ನು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿಭಟನೆ, ಬಂದ್ ನಡೆದು 144ನೆ ಸೆಕ್ಷನ್ ಜಾರಿಯಾಗಿತ್ತು. -ವಾರ್ತಾಭಾರತಿ
Please follow and like us:
error