ಪೆಟ್ರೋಲ್: 65 ಪೈಸೆ ಹೆಚ್ಚಳ?

 ಹೊಸದಿಲ್ಲಿ, ಡಿ.14: ಸರಕಾರ ಒಪ್ಪಿದಲ್ಲಿ ಸಾರ್ವಜನಿಕ ವಲಯ ತೈಲ ಸಂಸ್ಥೆಗಳು ಈ ವಾರ ಪೆಟ್ರೋಲ್‌ನ ಬೆಲೆ ಯನ್ನು ಲೀಟರ್‌ಗೆ ರೂ. 0.65 ರಷ್ಟು ಏರಿಸುವ ಸಾಧ್ಯತೆಯಿದೆ. ಅಮೆರಿಕನ್ ಡಾಲರ್ ನೆದುರು ರೂಪಾಯಿ ಅಭೂತ ಪೂರ್ವ ಕುಸಿತ ಕಂಡಿರುವ (ರೂ. 53.75/ಡಾ) ಕಾರಣ ಆಮದು ವೆಚ್ಚ, ಗ್ಯಾಸೊಲಿನ್‌ನ ಅಂತಾರಾಷ್ಟ್ರೀಯ ದರಗಳಲ್ಲಿ ಏರಿಕೆಯಾಗಿದೆ. ಇದರಿಂದ ದೇಶೀಯ ಪೆಟ್ರೋಲ್ ದರದ ಮೇಲೆ ಪರಿಣಾಮವಾಗಲಿದೆ ಯೆಂದು ತೈಲ ಸಂಸ್ಥೆಯೊಂದರ ಉನ್ನತ ಮೂಲ ತಿಳಿಸಿದೆ.
ಇದರಿಂದಾಗಿ 55ರಿಂದ 56 ಪೈಸೆಗಳಷ್ಟು ನಷ್ಟವಾಗುತ್ತಿದೆ. ಇದನ್ನು ಬೆಲೆ ಹೆಚ್ಚಿಸುವ ಮೂಲಕ ತುಂಬಿದಲ್ಲಿ ಸ್ಥಳೀಯ ತೆರಿಗೆ ಸೇರಿ ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ಲೀ.ಗೆ 65ರಿಂದ 66 ಪೈಸೆಗಳಷ್ಟು ಹೆಚ್ಚಲಿದೆ. ತೈಲ ಸಂಸ್ಥೆಗಳು ನಾಳೆ ಬೆಲೆ ಪರಾಮರ್ಶೆ ನಡೆಸಲಿದ್ದು, ಯಾವುದೇ ಬದಲಾವಣೆ ಡಿ.18ರಿಂದ ಜಾರಿಗೆ ಬರಲಿದೆ ಯೆಂದು ಅದು ಹೇಳಿದೆ.
Please follow and like us:
error