617 ಅಂಕ ಪಡೆದು ಸಮೀವುದೀನ್ ಜಿಲ್ಲೆಗೆ ಪ್ರಥಮ

ಎಸ್.ಎಸ್.ಎಲ್.ಸಿ. ಪರೀಕ್ಷೆ; 16 ನೇ ಸ್ಥಾನಕ್ಕೆರಿದ ಕೊಪ್ಪಳ
ಕೊಪ್ಪಳ ಏ. 2019 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಗೆ ಶೇ 80.45 ರಷ್ಟು ಫಲಿತಾಂಶ ಬಂದಿದ್ದು ಇದು ರಾಜ್ಯದಲ್ಲಿ 16 ನೇ ಸ್ಥಾನವನ್ನು ಪಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಮಿತ ಯರಗೋಲ್ಕರ್ ತಿಳಿಸಿದ್ದಾರೆ.
ಮಾಧ್ಯಮ ವಿವರದನ್ವಯ ಕನ್ನಡ ಮಾಧ್ಯಮದ 14761 ವಿದ್ಯಾರ್ಥಿಗಳಲ್ಲಿ 11668 ಉತ್ತಿರ್ಣ ಶೇ.79.05 ರಷ್ಟು, ಇಂಗ್ಲಿÃಷ್ ಮಾಧ್ಯಮ 3136 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 2940 ಉತ್ತಿರ್ಣರಾಗಿ ಶೇ.93.75 ರಷ್ಟು, ಉರ್ದು ಮಾಧ್ಯಮ 267 ರಲ್ಲಿ 169 ಉತ್ತಿÃರ್ಣ ಶೇ.63.3 ರಷ್ಟು, ತೆಲಗು 49 ರಲ್ಲಿ 42 ಉತ್ತಿರ್ಣ ಶೇ.85.71 ರಷ್ಟು, ಎಲ್ಲಾ ಮಾಧ್ಯಮ ಸೇರಿ 18216 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 14819 ಉತ್ತಿÃರ್ಣರಾಗಿ ಶೇ. 80.4525 ರಷ್ಟು ಫಲಿತಾಂಶ ಬಂದಿದೆ.
ತಾಲೂಕುವಾರು ವಿವರದನ್ವಯ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳಲ್ಲಿ ಸರ್ಕಾರಿ 20, ಅನುದಾನಿತ 01 ಹಾಗೂ ಅನುದಾನರಹಿತ ಖಾಸಗಿ 15 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಅನುದಾನರಹಿತ ಒಂದು ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಟ್ಯಾಪ್ 10 ವಿದ್ಯಾರ್ಥಿಗಳ ವಿವರದನ್ವಯ ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಎಂ.ಡಿ. ಸಮೀವುದ್ದಿÃನ್ ಅಹ್ಮದ್ 625ಕ್ಕೆ 617 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಗಂಗಾವತಿಯ ಲಿಟ್ಲ್ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೇಧರ ಭಂಡಾರಕರ್ 616 ಅಂಕ, ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸ್ನೆÃಹಾ ಉಪ್ಪಿನ 616 ಅಂಕ, ಕಾರಟಗಿಯ ಗ್ರಿÃನ್‌ವೆಲ್ಲಿÃ ರೂರಲ್ ಹೈಸ್ಕೂಲ್‌ನ ಬಿ. ಕೀರ್ತಿ 616 ಅಂಕ, ಕೊಪ್ಪಳದ ಶ್ರಿÃ ಶಿವಶಾಂತವೀರ ಇಂಗ್ಲಿÃಷ್ ಮಿಡಿಂ ಹೈಸ್ಕೂಲ್‌ನ ನವೀನ 616 ಅಂಕ, ಕುಷ್ಟಗಿ ತಾಲೂಕಿನ ಜಹಗೀರಗುಡದೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಾವ್ಯ ಹಿರೇಮಠ 615 ಅಂಕ, ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೆ.ಎಂ. ಭರತ್ 615 ಅಂಕ, ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರಿÃಹರಿ ಭಟ್ 614 ಅಂಕ, ಗಂಗಾವತಿಯ ಶ್ರಿÃ ಕೆ.ವಿ.ಎಸ್. ಕನ್ನಡ ಮಾಧ್ಯಮ ಪ್ರೌಢ ಶಾಲೆ ಮಲ್ಲಿಕಾರ್ಜುನ 613 ಅಂಕ ಹಾಗೂ ಮುನಿರಾಬಾದ್ ಗ್ರಾಮದ ಶಕ್ಷಾಯತನ್ ಇಂಗ್ಲಿÃ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿ ದಿಲೀಪ್ ಸಿಂಗ್ ಬಿಸ್ತ್ 612 ಅಂಕ ಪಡೆದಿದ್ದಾರೆ.
ಕಳೆದ 2017-2018 ನೇ ಸಾಲಿನಲ್ಲಿ ಶೇ 80.43 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 19 ನೇ ಸ್ಥಾನ ಪಡೆದಿತ್ತು. ಈ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಮೂರು ಸ್ಥಾನ ಮುಂದೆ ಬಂದಿದ್ದು ಇನ್ನಷ್ಟು ಸುಧಾರಣೆಯನ್ನು ಕಂಡಿದೆ. 2016-17 ರಲ್ಲಿ 76.05 ಫಲಿತಾಂಶ ಪಡೆದು 11, 2015-16 ರಲ್ಲಿ ಶೇ 75.93 ರಷ್ಟು ಫಲಿತಾಂಶ ಪಡೆದು 25 ನೇ ಸ್ಥಾನದಲ್ಲಿತ್ತು.
2019 ನೇ ಸಾಲಿಗೆ 11084 ಬಾಲಕರು ಹಾಗೂ 9516 ಬಾಲಕಿಯರು ಸೇರಿ ಒಟ್ಟು 20600 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 171 ಸರ್ಕಾರಿ ಪ್ರೌಢಶಾಲೆ. ಅನುದಾನಿತ 23 ಹಾಗೂ ಅನುದಾನ ರಹಿತ 88 ಶಾಲೆಗಳು ಸೇರಿದಂತೆ ಒಟ್ಟು 282 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 61 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.

Please follow and like us:
error