ಜಿಲ್ಲೆಯ ಶರಣಪ್ಪ ವಡಗೇರಿ ಸಹಿತ 58 ಗಣ್ಯರಿಗೆ ರಾಜ್ಯೋತ್ಸವ ಗೌರವ

 ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ, ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ರಾಘವ ನಂಬಿಯಾರ್, ಕೆ.ಪಿ.ರಾವ್ ಸೇರಿ ದಂತೆ 58 ಸಾಧಕರು ಈ

ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಜ್ಯ ಸರಕಾರವು 58ನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 58 ಮಹನೀಯರಿಗೆ 2013ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಸಾಹಿತ್ಯ:ಕೋ.ಚೆನ್ನಬಸಪ್ಪ(ದಾವಣಗೆರೆ),ಪ್ರೊ.ಚಂದ್ರಕಾಂತ ಕುಸನೂರು(ಗುಲ್ಬರ್ಗ), ಡಾ.ಮಲ್ಲಿಕಾ ಘಂಟಿ (ಬಾಗಲಕೋಟೆ) ,ಪ್ರೊ.ಕೆ.ಬಿ.ಸಿದ್ದಯ್ಯ (ತುಮಕೂರು), ಡಾ.ಶ್ರೀಕಂಠ ಕೂಡಿಗೆ (ಶಿವಮೊಗ್ಗ).
ರಂಗಭೂಮಿ: ಗಜಾನನ ಹರಿ ಮಹಾಲೆ (ಧಾರವಾಡ), ಎಚ್.ವಿ.ವೆಂಕಟಸುಬ್ಬಯ್ಯ (ಬೆಂಗಳೂರು), ನ.ರತ್ನ(ಮೈಸೂರು), ಪ್ಲೋರಿನಾ ಬಾಯಿ (ಗದಗ), ಶಶಿಧರ ಅಡಪ(ದಕ್ಷಿಣ ಕನ್ನಡ).
ಸಂಗೀತ:ಸೋಹನ್ ಕುಮಾರಿ (ಬೆಂಗಳೂರು), ಫಯಾಝ್‌ಖಾನ್ (ಧಾರವಾಡ), ಬಸವರಾಜ ತಿರುಕಪ್ಪ ಭಜಂತ್ರಿ (ಹಾವೇರಿ), ಹನುಮಂತ ರಾವ್ ಗೋನವಾರ (ರಾಯಚೂರು).
ನೃತ್ಯ: ಎಂ.ಶಕುಂತಲಾ ಹನುಮಂತಪ್ಪ (ಚಿಕ್ಕಮಗಳೂರು).
ಜಾನಪದ: ಡಾ.ಶಾಂತಿ ನಾಯಕ(ಉತ್ತರ ಕನ್ನಡ), ಎಲಿಸವ್ವ ಮಾದರ (ದಾವಣಗೆರೆ), ಬನ್ನೂರು ಕೆಂಪಮ್ಮ(ಮೈಸೂರು), ಮಹದೇವಪ್ಪ ಮೋನಪ್ಪ ಬಡಿಗೇರ (ಬಾಗಲಕೋಟೆ), ಶರಣಪ್ಪ ವಡಗೇರಿ(ಕೊಪ್ಪಳ).
ಯಕ್ಷಗಾನ-ಬಯಲಾಟ: ಡಾ.ಕೆ.ಎಂ.ರಾಘವ ನಂಬಿಯಾರ್ (ಉಡುಪಿ), ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ (ಕಾಸರ ಗೋಡು), ರಾಯಪ್ಪ ಸಂಗಪ್ಪ ಕುಂಬಾರ (ಬಾಗಲಕೋಟೆ), ಲಕ್ಷ್ಮೀಬಾಯಿ ಸಾಲಹಳ್ಳಿ (ಬೆಳಗಾವಿ).
ಸಮಾಜ ಸೇವೆ: ಸೂಲಗಿತ್ತಿ ನರಸಮ್ಮ (ತುಮಕೂರು), ಕೊಂಡಜ್ಜಿ ಬಿ.ಷಣ್ಮುಖಪ್ಪ (ದಾವಣಗೆರೆ), ಮೈನಾ ಗೋಪಾಲಕೃಷ್ಣ (ಮೈಸೂರು), ಟಿ.ರಾಜ(ಬೆಂಗಳೂರು), ಬಸವ ಲಿಂಗಪ್ಪ ಎಸ್.ಜಮಖಂಡಿ (ಬಾಗಲಕೋಟೆ).
ಹೊರನಾಡ ಕನ್ನಡಿಗ: ಡಾ.ಆರತಿ ಕೃಷ್ಣ(ಯುಎಸ್‌ಎ).
ಸಂಕೀರ್ಣ: ಹರೇಕಳ ಹಾಜಬ್ಬ(ದಕ್ಷಿಣ ಕನ್ನಡ), ಈಶ್ವರಚಂದ್ರ ಚಿಂತಾಮಣಿ (ಬಿಜಾಪುರ), ಸೂಗಯ್ಯ ಹಿರೇಮಠ (ಯಾದಗಿರಿ).
ಸಂಘ-ಸಂಸ್ಥೆ: ಶಾಹೀನ್ ಶಿಕ್ಷಣ ಸಂಸ್ಥೆ (ಬೀದರ್), ಬಿ.ಬಿ.ಬಣ್ಣದ ಜಾನಪದ ಕಲಾಮೇಳ (ಗದಗ).
ವಿಜ್ಞಾನ-ತಂತ್ರಜ್ಞಾನ: ಡಾ.ಕೆ.ಪಿ.ರಾವ್ (ಉಡುಪಿ), ಡಾ.ಎಸ್.ಅಯ್ಯಪ್ಪನ್ (ಚಾಮರಾಜನಗರ).
ಕೃಷಿ-ಪರಿಸರ: ಕೆ.ನಾರಾಯಣ ಸ್ವಾಮಿ (ಚಿಕ್ಕಬಳ್ಳಾಪುರ), ಡಾ.ಎಂ.ಸಿ.ಸುಭಾಶ್ಚಂದ್ರ(ಉತ್ತರ ಕನ್ನಡ), ಅನುಸೂಯಮ್ಮ (ರಾಮನಗರ), ವಸಂತಕುಮಾರ್ ತಿಮಕಾಪುರ(ಮೈಸೂರು).
ಕ್ರೀಡೆ: ಡಾ.ಸಿ.ಎಂ.ಮುತ್ತಯ್ಯ(ಕೊಡಗು), ಜಿ.ಎಚ್.ತುಳಸೀಧರ (ಬಳ್ಳಾರಿ), ಸದಾಶಿವ ಸಾಲಿಯಾನ(ದಕ್ಷಿಣ ಕನ್ನಡ).
ಲಲಿತ ಕೆ: ಶೀಲಾ ಗೌಡ(ಬೆಂಗಳೂರು), ಅಲ್ಲಿಸಾಬ್ ಸೈ ನದಾಫ್ (ಬಾಗಲಕೋಟೆ), ಟಿ.ಎಂ.ಮಾಯಾಚಾರ್(ಮಂಡ್ಯ), ವಿಜಯ ಹಾಗರಗುಂಡಗಿ (ಗುಲ್ಬರ್ಗ).
ವೈದ್ಯಕೀಯ: ಡಾ.ವಿ.ಲಕ್ಷ್ಮೀನಾರಾಯಣ(ಕೋಲಾರ).
ಚಲನಚಿತ್ರ:ಸುಂದರನಾಥ ಸುವರ್ಣ(ದಕ್ಷಿಣ ಕನ್ನಡ),ಆರ್.ರತ್ನ(ಬೆಂಗಳೂರು),ಲೋಕನಾಥ್(ಬೆಂಗಳೂರು ಗ್ರಾಮಾಂತರ), ಗಿರಿಜಾ ಲೋಕೇಶ್(ಬೆಂಗಳೂರು). 
ಮಾಧ್ಯಮ:ಗುಡಿಹಳ್ಳಿ ನಾಗರಾಜ(ಚಿತ್ರದುರ್ಗ), ಸಿ.ಜಿ.ಮಂಜುಳಾ (ಬೆಂಗಳೂರು), ಆರ್.ಪಿ.ವೆಂಕಟೇಶ್‌ಮೂರ್ತಿ(ಹಾಸನ) , ಪಿ.ಮಹಮ್ಮದ್ (ವ್ಯಂಗ್ಯಚಿತ್ರ-ಬೆಂಗಳೂರು ), ಎಸ್.ಆರ್.ವೆಂಕಟೇಶಪ್ರಸಾದ್(ವಿದ್ಯುನ್ಮಾನ ಮಾಧ್ಯಮ-ಕೋಲಾರ).
Please follow and like us:
error