ವೈ.ಸಂಪಂಗಿ ಈಗ ಕೈದಿ ನಂ.5627

 ಲಂಚ ಸ್ವೀಕಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೆಜಿಎಫ್ ಶಾಸಕ ವೈ.ಸಂಪಂಗಿ ಈಗ ಕೈದಿ ನಂ.5627.ಸಜಾ ಬಂಧಿಯಾಗಿರುವ ವೈ.ಸಂಪಂಗಿ ಮನೆಯ ಊಟಕ್ಕೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಎಲ್ಲ ಕೈಅಗಳಿಗೆ ನೀಡುವ ಊಟವನ್ನು ಅವರು ಸೇವಿಸಿದ್ದಾರೆ. ಕೈದಿಗಳಂತೆಯೇ ಸಮವಸ್ತ್ರ ಧರಿಸಿರುವ ಸಂಪಂಗಿ, ಸಹ ಕೈದಿಗಳೊಂದಿಗೆ ಯಾವುದೇ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.ನಿವೇಶನ ವಿವಾದ ಬಗೆಹರಿಸುವ ಸಂಬಂಧ ಲಂಚ ಸ್ವೀಕಾರ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯ ನಿನ್ನೆಯೆಷ್ಟೇ ಶಾಸಕ ಸಂಪಂಗಿಗೆ ಮೂರುವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1ಲಕ್ಷ ರೂ.ಅದಂಡ ವಿಧಿಸಿ ತೀರ್ಪು ನೀಡಿತ್ತು.
Please follow and like us:
error