5, 8ನೆ ತರಗತಿಗೆ ಹೊಸಪಠ್ಯ: ಕಾಗೇರಿ

 ಬೆಂಗಳೂರು,  ರಾಷ್ಟ್ರೀಯ ಪಠ್ಯಕ್ರಮದ ಮಾರ್ಗಸೂಚಿಯ ಅನ್ವಯ ಒಂದನೆ ತರಗತಿಯಿಂದ ಪಿಯುಸಿವರೆಗಿನ ಪಠ್ಯ ಕ್ರಮ ಬದಲಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಐದು ಮತ್ತು ಎಂಟನೆ ತರಗತಿಯ ಪಠ್ಯಕ್ರಮಗಳನ್ನು ಬದಲಾಯಿಸ ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸರಕಾರಿ ಮುದ್ರಣಾಲಯದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದ ಅವರು, ರಾಷ್ಟ್ರೀಯ ಪಠ್ಯ ಶಿಕ್ಷಣ ಮಾರ್ಗಸೂಚಿ 2005ರ ಪ್ರಕಾರ ಒಂದರಿಂದ ಪಿಯುಸಿವರೆಗಿನ ಪಠ್ಯಕ್ರಮಗಳನ್ನು ಬದಲಾಯಿಸಲಾಗುವುದು ಎಂದರು.
2013-14ನೆ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಪಿಯುಸಿ ವರೆಗೆ ಹೊಸ ಪಠ್ಯ ಕ್ರಮ ಜಾರಿಗೊಳ್ಳಲಿದೆ ಎಂದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯ ವಿಜ್ಞಾನ ವಿಷಯ ಸಿಬಿಎಸ್‌ಸಿ ಪಠ್ಯಕ್ರಮವಾಗಿರುತ್ತದೆ. ಇದಕ್ಕಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಎಸೆಸೆಲ್ಸಿ ಪರೀಕ್ಷಾ ನಂತರ ಸೇತುಬಂಧ ಕಾರ್ಯಕ್ರಮ ನಡೆಸಲಾಗುವುದು. ಅದರ ಜೊತೆಗೆ ಶಿಕ್ಷಕರಿಗೂ ತರಬೇತಿ ನೀಡಲಾಗು ವುದು ಎಂದರು.
ಕೇಂದ್ರ ಸರಕಾರ ಏಕರೂಪದ ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಸರಕಾರ ಪಠ್ಯ ಕ್ರಮ ಬದಲಾವಣೆಗೆ ಮುಂದಾಗಿದೆ ಎಂದರು. ಮುಂದಿನ ವರ್ಷದಿಂದ ವಿಜ್ಞ್ಞಾನ ವಿಭಾಗದ ಪಠ್ಯ ಕ್ರಮದಲ್ಲಿ ಕೇಂದ್ರದ ಸಿಬಿಎಸ್‌ಸಿ ಪಠ್ಯ ಕ್ರಮ ಅಳವಡಿಸಲಾಗುವುದು. ಅದರ ನಂತರದ ವರ್ಷ ದ್ವಿತೀಯ ಪಿಯುಸಿ ಪಠ್ಯದಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿ ಕೊಳ್ಳಲಾಗುವುದು ಎಂದು ಕಾಗೇರಿ ಹೇಳಿದರು.
Please follow and like us:
error