ವಿದ್ಯುತ್ ಮಗ್ಗ ನೇಕಾರರುಗಳಿಂದ 42 ಲಕ್ಷ ಮೀಟರ್ ಸಮವಸ್ತ್ರ ಬಟ್ಟೆ ಪೂರೈಕೆಗೆ ಕ್ರಮ – ಸಚಿವ ಬಾಬುರಾವ್ ಚಿಂಚನಸೂರ್

ಬೆಂಗಳೂರು,  : ನನ್ನ ಖಾತೆಗೆ ಸಂಬಂಧಿಸಿದಂತೆ ನಾನು ಶಿಕ್ಷಣ ಇಲಾಖೆಯೊಂದಿಗೆ ಸಾಕಷ್ಟು ಪ್ರಯತ್ನ ಮತ್ತು ಪರಿಶ್ರಮವಹಿಸಿ ಪ್ರಸ್ತುತ ಸಾಲಿಗೆ 42 ಲಕ್ಷ ಮೀಟರ್ ಸಮವಸ್ತ್ರ ಬಟ್ಟೆಯನ್ನು ವಿದ್ಯುತ್ ಮಗ್ಗ ನೇಕಾರರುಗಳಿಂದ ನೇಯಿಸಿ, ಶಿಕ್ಷಣ ಇಲಾಖೆಗೆ ಪೂರೈಸುವ ಬಗ್ಗೆ ಸರ್ಕಾರದಿಂದ ಆದೇಶ ಪಡೆಯಲಾಗಿದೆ” ಎಂದು ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಶ್ರೀ ಬಾಬುರಾವ್ ಚಿಂಚನಸೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮವಸ್ತ್ರ ಉತ್ಪಾದನೆ ನಿರ್ವಹಣೆಗೆ ಅನುಸರಿಸಬೇಕಾದÀ ಯಾವುದೇ ದಾಖಲಾತಿಗಳನ್ನು ಘಟಕಗಳಲ್ಲಿ ಕಂಡು ಬರುವುದಿಲ್ಲ.  ಹೀಗೆ ತನಿಖಾಧಿಕಾರಿಗಳು ಸಲ್ಲಿಸಿದ ಸುದೀರ್ಘ ಮತ್ತು ನೈಜ ವರದಿಯ ಆಧಾರದ ಮೇಲೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರು ಸರ್ಕಾರದ ಮಟ್ಟದಲ್ಲಿ ಒಂದು ತೀರ್ಮಾನ ತೆಗೆದುಕೊಂಡು ಪ್ರಸ್ತುತ ಸಾಲಿನ ವಿದ್ಯಾವಿಕಾಸ ಯೋಜನೆಯ ಅಡಿಯಲ್ಲಿ ಕರ್ನಾಟಕ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಶಿಕ್ಷಣ ಇಲಾಖೆಯಿಂದ ನೀಡಲಾಗಿದ್ದ ಒಟ್ಟು 42.00 ಲಕ್ಷ ಮೀಟರ್ ಬಟ್ಟೆಯ ಪೈಕಿ 21.00 ಲಕ್ಷ ಮೀಟರ್ ಬಟ್ಟೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಶಿಕ್ಷಣ ಇಲಾಖೆಗೆ ನೀಡುವುದು.  ಉಳಿದ 21.00 ಲಕ್ಷ ಮೀಟರ್ ಬಟ್ಟೆಯನ್ನು ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಟೆಂಡರ್ ಆಹ್ವಾನಿಸಿ ಸಮವಸ್ತ್ರ ಖರೀದಿಸಿ, ಶಿಕ್ಷಣ ಇಲಾಖೆಗೆ ಪೂರೈಸುವುದು ಎಂದು ದಿನಾಂಕ 17-03-2015 ರಂದು ಸರ್ಕಾರಿ ಆದೇಶವಾಗಿದೆ ಎಂದು ಸಚಿವರು  ವಿವರಿಸಿದ್ದಾರೆ.

Leave a Reply