You are here
Home > Koppal News > ಡಿಸೆಂಬರ್ 4ರಂದು ಬಜರಂಗದಳದವತಿಯಿಂದ ಅಂಜನಾದ್ರಿ ಬೆಟ್ಟದಲ್ಲಿ ಹನುಮವ್ರತ

ಡಿಸೆಂಬರ್ 4ರಂದು ಬಜರಂಗದಳದವತಿಯಿಂದ ಅಂಜನಾದ್ರಿ ಬೆಟ್ಟದಲ್ಲಿ ಹನುಮವ್ರತ

ಕೊಪ್ಪಳ : ಬಜರಂಗದಳದವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನೇಯ ಜನ್ಮಸ್ಥಾನವೆಂದು ಕರೆಯಲ್ಪಡುವ ಅಂಜನಾದ್ರಿ ಬೆಟ್ಟದಲ್ಲಿ ಹನುಮಧ್ ವ್ರತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ 15 ಜಿಲ್ಲೆಗಳಿಂದ ಸುಮಾರು 3000 ಕ್ಕೂ ಹೆಚ್ಚು  ಬಜರಂಗದಳದ ಕಾರ್ಯಕರ್ತರು ಹನುಮಮಾಲೆ ದಾರಣೆ ಮಾಡಿ ಡಿಸೆಂಬರ್ 4ರಂದು ಪರ್ವತಕ್ಕೆ ಆಗಮಿಸಲಿದ್ದಾರೆ ಎಂದು  ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹೇಳಿದರು.

         ಮೀಡಿಯಾ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಡಿ.4ರಂದು ಗಂಗಾವತಿ ನಗರದ ಶ್ರೀ ಚನ್ನಬಸವ ಮಠದಿಂದ ಬಸ್ ನಿಲ್ದಾಣದವರೆಗೆ ಹನುಮ ಮಾಲಾಧಾರಿಗಳಿಂದ ಸಂಕೀರ್ತನೆ ಯಾತ್ರೆ ನಡೆಯಲಿದೆ. ಬಳಿಕ ಜರುಗವು ದಾರ್ಮಿಕ ಸಭೆಯಲ್ಲಿ ವಿವಿಧ ಮಠಗಳ ಸ್ವಾಮಿಜಿಗಳು ಪಾಲ್ಗೊಳ್ಳಲಿದ್ದಾರೆ. ಬಜರಂಗದಳದ ರಾಷ್ಟ್ರೀಯ ಸಂಯೋಜನ ರಾಜೇಶ್ ಪಾಂಡೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿಯ ಕೆ.ದಿವಾಕರ, ಹೊಸಪೇಟೆಯ ಅಪ್ಪಾರಾವ್ ಮತ್ತು ಬಳ್ಳಾರಿಯ ಸಂಚಾಲಕ ನರಸಿಂಹಮೂರ್ತಿ ಇದ್ದರು. 

Leave a Reply

Top