4 ಹೊಸ ಪ್ರಕರಣ,ಒಂದು ಸಾವು , 23 ಡಿಸ್ಚಾರ್ಜ

Koppal : ಜಿಲ್ಲೆಯಲ್ಲಿ ಕರೋನಾ ತನ್ನ ಅಟ್ಟಹಾಸ ಮುಂದುವರೆಸಿದ್ದು ಮತ್ತೊಬ್ಬರನ್ನು ಬಲಿಪಡೆದಿದೆ. ಅಲ್ಲದೇ ಇಂದು ಹೊಸದಾಗಿ ೪ ಪ್ರಕರಣಗಳು ವರದಿಯಾಗಿವೆ ಸಮಾಧಾನದ ಸಂಗತಿ ಎಂದರೆ ೨೩ ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕೊಪ್ಪಳ: ಕೊರೊನಾ‌ ಮಹಾಮಾರಿಯ ಅಟ್ಟಹಾಸ ಜೋರಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು ಮೃತರ ಸಂಖ್ಯೆ ಎರಡಕ್ಕೆ ತಲುಪಿದೆ. ಹಾಗೆಯೇ 4 ಹೊಸ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ವಿವರಗಳನ್ನು ಜಿಲ್ಲಾಡಳಿತ ಈವರೆಗೆ ಬಿಡುಗಡೆ ಮಾಡಿಲ್ಲ. ಇದರ ಜೊತೆಗೆ ಸಂತಸದ ಸಂಗತಿ ಎಂದರೆ ಸೋಂಕಿತರ ಪೈಕಿ 23 ಜನ ಕೊರೊನಾದಿಂದ ಮುಕ್ತಿ ಪಡೆದು ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 101 ಅಗುವ ಮೂಲಕ ಶತಕದ ಗಡಿ ದಾಟಿದೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, 41 ಜನ ಗುಣಮುಖರಾಗಿದ್ದಾರೆ. ಇನ್ನುಳಿದ 58 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಡಳಿತ ಪ್ರಯತ್ನಗಳ ಹೊರತಾಗಿಯೂ ದಿನನಿತ್ಯ ಹೊಸಪ್ರಕರಣಗಳು ಪತ್ತೆಯಾಗುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

Please follow and like us:
error