ನಾಳೆ ಮುಖ್ಯ ವೇದಿಕೆಯಲ್ಲಿಯೇ 371 ಕಲಂ ಗೋಷ್ಟಿ


371ನೇ ಕಲಂ ಕುರಿತು ಗೋಷ್ಠಿಯನ್ನು ಮುಖ್ಯ ವೇದಿಕೆಯಲ್ಲಿಯೇ  ಅವಕಾಶ ನೀಡಬೇಕೆಂಬ ಹೋರಾಟಗಾರರ ಬೇಡಿಕೆಗೆ ಕೊನೆಗೂ ಮಣಿದ  ನಲ್ಲೂರ ಪ್ರಸಾದ ನಾಳೆ ದಿ. 10ರಂದು  ಮುಖ್ಯ ವೇದಿಕೆಯಲ್ಲಿಯೇ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. 

ಗೋಷ್ಠಿಯಲ್ಲಿ ಬಸವಂತರಾಯ ಕುರಿ , ರಜಾಕ್ ಉಸ್ತಾದ ಹಾಗೂ ಬಿ.ಎಸ್. ಪಾಟೀಲ್  ಮಾತನಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಷ್ಟ್ಗಗಿ ವಹಿಸಿಕೊಳ್ಳಲಿದ್ದಾರೆ. 
ಈ ಸಂದರ್ಭದಲ್ಲಿ ರಾಘವೇಂದ್ರ ಕುಷ್ಟಗಿ, ರಜಾಕ್ ಉಸ್ತಾದ್, ಪ್ರಭು ಉಪನಾಳ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error