You are here
Home > Koppal News > ಹಜ್ ಯಾತ್ರೆ: ಕಾಲ್ತುಳಿತಕ್ಕೆ 310 ಬಲಿ

ಹಜ್ ಯಾತ್ರೆ: ಕಾಲ್ತುಳಿತಕ್ಕೆ 310 ಬಲಿ

ಮಿನಾ (ಪಿಟಿಐ): ಹಜ್ ಯಾತ್ರೆ ವೇಳೆ ಮೆಕ್ಕಾ ಸಮೀಪ ಮಿನಾದಲ್ಲಿ ಕಾಲ್ತುಳಿತಕ್ಕೆ 310 ಮಂದಿ ಸಾವಿಗೀಡಾಗಿದ್ದು, 450 ಜನ ಗಾಯಗೊಂಡ ದುರ್ಘಟನೆ ಗುರುವಾರ ಸಂಭವಿಸಿದೆ.
ಪವಿತ್ರ ಯಾತ್ರಾ ಸ್ಥಳ ಮೆಕ್ಕಾದಲ್ಲಿ ಪ್ರಸಕ್ತ ವರ್ಷ ಸಂಭವಿಸಿದ ಎರಡನೇ ದೊಡ್ಡ ದುರಂತ ಇದಾಗಿದ್ದು, ಕಾಲ್ತುಳಿತಕ್ಕೆ ಸತ್ತವರ ಸಂಖ್ಯೆ 100ರಿಂದ 310ಕ್ಕೆ ಏರಿದೆ. 450 ಜನ ಗಾಯಗೊಂಡಿದ್ದಾರೆ ಎಂದು ಇಲ್ಲಿನ ನಾಗರಿಕ ರಕ್ಷಣಾ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. 
ಘಟನೆಯಲ್ಲಿ ಒಬ್ಬ ಭಾರತೀಯ ಗಾಯಗೊಂಡ ಬಗ್ಗೆ ವರದಿಯಾಗಿದೆ. ಯಾತ್ರೆಯಲ್ಲಿ 1.5 ಲಕ್ಷ ಮಂದಿ ಭಾರತೀಯರು ಸೇರಿದಂತೆ 20 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸೆ. 11ರಂದು ಮೆಕ್ಕಾದಲ್ಲಿ ಸಂಭವಿಸಿದ ಕ್ರೇನ್ ದುರಂತದಲ್ಲಿ 107 ಮಂದಿ ಸಾವಿಗೀಡಾಗಿದ್ದರು. 

Leave a Reply

Top