ಗಣಿಕಾಂಡ: ಜನಾರ್ದನ ರೆಡ್ಡಿ ಜಾಮೀನು ತೀರ್ಪು 30ಕ್ಕೆ


ಜನಾರ್ದನ ರೆಡ್ಡಿ ಮತ್ತು ಇಲ್ಲಿನ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಜಾಮೀನು ಅರ್ಜಿ ತೀರ್ಪು ಡಿ.30ರಂದು

ಹೈದರಾಬಾದ್‌:ಓಬುಳಾಪುರಂ ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಇಲ್ಲಿನ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಜಾಮೀನು ಅರ್ಜಿ ತೀರ್ಪು ಡಿ.30ರಂದು ಪ್ರಕಟಗೊಳ್ಳಲಿದೆ.

ಈಗಾಗಲೇ ವಾದ ಪ್ರತಿವಾದ ಪೂರ್ಣಗೊಂಡಿದ್ದು,ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.ಇದೇ ವೇಳೆ,ಇದೇ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ವೈ. ಶ್ರೀಲಕ್ಷ್ಮಿ ಜಾಮೀನು ನೀಡಿಕೆ ರದ್ದತಿ ಕೋರಿರುವ ಸಿಬಿಐ ಮೇಲ್ಮನವಿಯನ್ನು ಹೈಕೋರ್ಟ್‌ ಜ.2ರಂದು ಪ್ರಕಟಿಸಲಿದೆ.ಇನ್ನೊಬ್ಬ ಆರೋಪಿ ಅಧಿಕಾರಿ ರಾಜಗೋಪಾಲ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

Please follow and like us:
error