ವಿಧಾನಸೌಧದ 3ನೇ ಮಹಡಿ ಭ್ರಷ್ಟಾಚಾರದ ಮೂಲ – ಬಸವರಾಜ ರಾಯರಡ್ಡಿ

ಕೊಪ್ಪಳ : ಭ್ರಷ್ಟಾಚಾರಕ್ಕೆ ಮೂಲಕ ಕಾರಣವೇ ಈ ಟ್ರಾನ್ಸ್ ಪರ್ ದಂದೆ. ಇದೊಂದು ದೊಡ್ಡ ಇಂಡಸ್ಟ್ರೀ ತರಹ ಬೆಳೆದಿದೆ. ಇದನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಡೆಗಟ್ಟಬೇಕು ಎಂದು ಯಲಬುರ್ಗಾ ಶಾಸಕ ಕಾಂಗ್ರೆಸ್ ಹಿರಿಯ ನಾಯಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.  ಸಿದ್ದರಾಮಯ್ಯನವರ ವಿರುದ್ದ 20 ಶಾಸಕರು ತಮ್ಮ ಅಸಮಧಾನ ವ್ಯಕ್ತಪಡಿಸಿ ಹೈಕಮಾಂಡಿಗೆ ಪತ್ರ ಬರೆದಿದ್ದಾರಂತಲ್ಲ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
           
  371ಜೆ  ಹೈ-ಕ ಅಭಿವೃದ್ಧಿ ಮಂಡಳಿಗೆ ಕೇಂದ್ರ ಅಸ್ತು  ಎಂದಿದ್ದರ ಪ್ರಯುಕ್ತ  ಹೆಚ್ಚಿನ ವಿವರಣೆ ನೀಡಲು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.  ಇನ್ನೊಂದರೆಡು ದಿನಗಳಲ್ಲಿ ರಾಷ್ಟ್ರಪತಿಯವರ ಅಂಕಿತ ವಾಗುತ್ತದೆ. ಇದರಿಂದ ನಮ್ಮ ಭಾಗದ ಸಮಗ್ರ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.
           ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ವಿಜನ್ 2025 ಯೋಜನೆಯನ್ನು ರೂಪಿಸಿದ್ದು. ಮುಂದಿನ ದಿನಗಳಲ್ಲಿ   ನಿರಂತರ ಅಭಿವೃದ್ದಿ  ಕಾರ್ಯಗಳು ನಡೆಯುವಂತಾಗಲು ಈ ಯೋಜನೆ ರೂಪಿಸಲಾಗಿದ್ದು. ಈ ರೀತಿಯ ಯೋಜನೆಯನ್ನು ಬೇರೆಯ ಕ್ಷೇತ್ರಗಳಲ್ಲೂ ಜಾರಿಯಾಗಬೇಕು. ಇದೇ ತಿಂಗಳ 12ರಂದು ಕುಕನೂರಿನಲ್ಲಿ ಹಲವಾರು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದಕ್ಕೆ ಚಾಲನೆ ನೀಡಲು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಅಂದು ಕೊಪ್ಪಳ ಜನತೆಯ ಪರವಾಗಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಾನೂ ಆಕಾಂಕ್ಷಿ: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾನೂ ಆಕಾಂಕ್ಷಿ ..ಅದೇ ರೀತಿ ಅಮರೇಗೌಡರು ಆಕಾಂಕ್ಷಿಗಳಾಗಿದ್ದಾರೆ ಎಂದರು. 

Please follow and like us:
error