fbpx

ಸೆ.27 ರಂದು ಕೊಪ್ಪಳದ ಶಾದಿಮಹಲ್‍ನಲ್ಲಿ ಮುತವಲ್ಲಿ ಸಮಾವೇಶ

 ಜಿಲ್ಲಾ ವಕ್ಫ ಸಲಹಾ ಸಮಿತಿಯಿಂದ ಮಸ್ಜೀದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ ಇಮಾಮ್ ಮತ್ತು ಮೌಜ್ಜನರವರ ಮಾಸಿಕ ಗೌರವ ಧನದ ಕುರಿತು ಹಾಗೂ ವಕ್ಫ್ ಸಂಸ್ಥೆಗಳ ಅಭಿವೃದ್ದಿಯ ಪ್ರಗತಿಪರ ಚರ್ಚೆ ಕುರಿತು ಸೆ.27 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಮುಸ್ಲಿಂ ಶಾದಿಮಹಲ್‍ನಲ್ಲಿ ಮುತವಲ್ಲಿ ಸಮಾವೇಶ ಏರ್ಪಡಿಸಲಾಗಿದೆ. 
ರಾಜ್ಯ ವಕ್ಫ್ ಮಂಡಳಿಯಲ್ಲಿ ನೊಂದಣಿಯಾಗಿರುವ ಮತ್ತು ನೋಂದಣಿಯಾಗದಿರುವ ಸಂಸ್ಥೆಗಳಾದ ಮಸ್ಜೀದಗಳ, ಆಶೂರಖಾನಗಳ, ಶಾದಿಮಹಲ್‍ಗಳ, ಖಬರಸ್ತಾನಗಳ, ಖಾನಖಾಗಳ, ದರ್ಗಾಗಳ, ಝಂಡಾ ಕಟ್ಟಗಳ, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಮುತ್ತವಲ್ಲಿಗಳು, ಖಾಜಿಗಳು, ಮುಜಾವರಗಳು, ಆಡಳಿತಾಧಿಕಾರಿಗಳು, ಪೇಶ ಇಮಾಮ್, ಮೌಜ್ಜನವರು ಮುತವಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಸಂಬಂಧಿಸಿದ ಗ್ರಾ.ಪಂ.ಅಧಿಕಾರಿಗಳಿಂದ ಸಂಸ್ಥೆಗಳ ಚಾಲ್ತಿ ಖಾತಾ ಉತಾರ, ಅದರ ಚೆಕ್ಕ-ಬಂದಿಯ ವಿವರ, ದೃಢೀಕರಣ ಪತ್ರದೊಂದಿಗೆ ಹಾಜರಾಗುವಂತೆ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷರಾದ ಮುಸ್ತಫಾ ಕಮಾಲ್ ಪಾಷಾ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!