ತುಂಗಭದ್ರಾ ಭೂ ಸ್ವಾಧೀನ: 26ರಂದು ತೀರ್ಪು

ಕೊಪ್ಪಳ: ತುಂಗಭದ್ರಾ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಅಗಳಕೇರಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ತ್ವರಿತ ನ್ಯಾಯಾಲಯ ನ. 26ರಂದು ತೀರ್ಪು ಪ್ರಕಟಿಸಲಿದೆ.
ಪೂರ್ವನಿರ್ಧಾರದಂತೆ ಶುಕ್ರವಾರ ತೀರ್ಪು ಪ್ರಕಟಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ತೀರ್ಪು ಪ್ರಕಟಿಸುವುದನ್ನು ನ. 26ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ಪ್ರಕಟಿಸಿತು.ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿಂದ ಅರ್ಜಿದಾರರು-ಪ್ರತಿವಾದಿಗಳು ಹಾಗೂ ಅವರ ಸ್ನೇಹಿತರು ಸಾಕಷ್ಟು ಸಂಖ್ಯೆಯಲ್ಲಿ ಇಂದು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಆದರೆ, ನ್ಯಾಯಾಲಯ ಮಾತ್ರ ತೀರ್ಪನ್ನು ಮುಂದೂಡಿದಾಗ   ಕಕ್ಷದಾರರು ನಿರಾಸೆಯಿಂದ ನಿರ್ಗಮಿಸಿದರು.

Leave a Reply