ಹೆಕ್ಟರ್ ಗೆ 25 ಸಾವಿರ ಪರಿಹಾರ ನೀಡಿ – ಸಂಸದ ಕರಡಿ ಸಂಗಣ್ಣ

ಕೊಪ್ಪಳ : ಇತ್ತೀಚಿಗೆ ಸುರಿದ ಆಣೆಕಲ್ಲು ಮಳೆಯಿಂದಾಗಿ ಗಂಗಾವತಿ,ಸಿಂದನೂರ ಭಾಗದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.  ಇತಿಹಾಸದಲ್ಲಿಯೇ ಮೊದಲಬಾರಿಗೆ ಇಷ್ಟೊಂದು ಘೋರ ಅನಾಹುತ ಸಂಭವಿಸಿದೆ.  ಈಗ ನೀಡಲಾಗುತ್ತಿರುವ  ಪರಿಹಾರ ಸಾಕಾಗದು. ಸುಮಾರು 67979 ಎಕರೆ ಯಲ್ಲಿಯ ಭತ್ತ ನಾಶವಾಗಿದೆ.  ನಾಳೆ ವೈಮಾನಿಕ ಸಮೀಕ್ಷೆಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 25 ಸಾವಿರ ರೂಪಾಯಿ ಪ್ರತಿ ಹೆಕ್ಟರ್ ಗೆ ಪರಿಹಾರ ನೀಡಬೇಕೆಂದು ಸಂಸದ ಕರಡಿ ಸಂಗಣ್ಣ ಆಗ್ರಹಿಸಿದರು. ಅವರು ಕೊಪ್ಪಳದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
 ಜಿಲ್ಲಾ ಉಸ್ತುವಾರಿ ಸಚಿವರು  ಯಾವುದೇ ಕಾಳಜಿ ತೋರುತ್ತಿಲ್ಲ. ಸಂತ್ರಸ್ತರು ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರಿಗಾಗಿ ಗಂಜಿ ಕೇಂದ್ರಸಹ ಆರಂಭ ಮಾಡಿಲ್ಲ. ಇದು ಸಚಿವರ ನಿಷ್ಕ್ರೀಯತೆ ತೋರಿಸುತ್ತದೆ.  ಬ್ಯಾಂಕ್ ಗಳು ನೀಡಿರುವ ಕ್ರಾಪ್ ಲೋನ್ ನ್ನು ದೀರ್ಘಾವಧಿಯ ಸಾಲವನ್ನಾಗಿ ಪರಿವರ್ತಿಸಬೇಕು. ಮತ್ತು ರೈತರಿಗೆ ಕೃಷಿ ಸಾಲ ನೀಡಬೇಕೆಂದು ಒತ್ತಾಯಿಸಿದರು.
 ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಬಿಜೆಪಿಯ ಯುವಮುಖಂಡ ಹಾಲೇಶ ಕಂದಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply