fbpx

ಸೆ.25 ರಿಂದ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ

 ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ಜಿಲ್ಲೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಸೆ.25 ರಿಂದ ಅ.03 ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
  ಸೆ.25 ರ ಸಂಜೆ 6.30 ಕ್ಕೆ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಉದ್ಘಾಟನೆ ಸಮಾರಂಭ ಜರುಗಲಿದ್ದು, ದಸರಾ ಮಹೋತ್ಸವದ ಘಟಸ್ಥಾಪನೆಯನ್ನು ಸಂಸದ ಸಂಗಣ್ಣ ಕರಡಿ ಅವರು ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರಿಂದ ದಸರಾ ಮಹೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ.ಸದಸ್ಯ ಟಿ.ಜನಾರ್ಧನ ಹುಲಿಗಿ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ, ತಾ.ಪಂ.ಸದಸ್ಯೆ ಸುಶೀಲಮ್ಮ ವಡ್ಡರ್, ಹುಲಿಗಿ ಗ್ರಾ.ಪಂ.ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಆಗಮಿಸಲಿದ್ದಾರೆ. 
ಸೆ.25 ರಿಂದ ಅ.03 ರವರೆಗೆ ಜರುಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.  ಸೆ.25 ರ ಸಂಜೆ 6.30 ಕ್ಕೆ ಘಟಸ್ಥಾಪನೆ ಲಕ್ಷ್ಮೇಶ್ವರದ ಕೃಷ್ಣ ಕ್ಷತ್ರೀಯ ಇವರಿಂದ ಮಂಗಲವಾದ್ಯ, ಸೆ.26 ರಂದು ವಿಜಯಲಕ್ಷ್ಮೀ ವೆಂಕಟೇಶ ಹಾಗೂ ಸಂಗಡಿಗರಿಂದ ದೇವರನಾಮಗಳು ಹಾಗೂ ಭಕ್ತಿ ಸಂಗೀತ, ಕೇಶವ್ರಾಜ್ ಮತ್ತು ತಂಡದವರಿಂದ ಸಿತಾರ್ ಹಾಗೂ ಬಾನ್ಸುರಿ ಜುಗಲ್ಬಂದಿ, ಸೆ.27 ರಂದು ಗದಗ ಜಿಲ್ಲೆಯ ಆನಂದ ಸಿಂಗ್ರೆ ಇವರಿಂದ ಮಿಮಿಕ್ರಿ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸೆ.28 ರಂದು ವಾಸುದೇವ್ ಕರಣಂ ಹಾಗೂ ಸಂಗಡಿಗರಿಂದ ಸುಗಮಸಂಗೀತ ಹಾಗೂ ಭಾವಗೀತೆಗಳು ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಶಾರ್ದೂಲವಾಹನ ಪೂಜೆ, ಸೆ.29 ರಂದು ಮೈಸೂರಿನ ಹೆಚ್. ವಸಂತಲಕ್ಷ್ಮೀ ಇವರಿಂದ ಹರಿಕಥಾ ಕಾಲಕ್ಷೇಪ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಸಿಂಹವಾಹನ ಪೂಜೆ, ಸೆ.30 ರಂದು ಹುಬ್ಬಳ್ಳಿಯ ಆಕಾಶವಾಣಿ ಕಲಾವಿದ ಕೃಷ್ಣೆಂದ್ರ ವಾರ್ಡೇಕರ್ ಇವರಿಂದ ಭಕ್ತಿ ಸಂಗೀತ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಮಯೂರವಾಹನ ಪೂಜೆ, ಅ.01 ರಂದು ಹಾವೇರಿಯ ಬಸವರಾಜ ಶಿಗ್ಗಾವಿ ಹಾಗೂ ವೀರೇಶ ಬಡಿಗೇರ ತಂಡದವರಿಂದ ಜಾನಪದ ಸಾಂಸ್ಕøತಿಕ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಅಶ್ವವಾಹನ ಪೂಜೆ, ಅ.02 ರಂದು ಕೊಪ್ಪಳದ ಸದಾಶಿವ ಪಾಟೀಲ್ರಿಂದ ವಚನ ಸಂಗೀತ, ಹೆಚ್.ಆರ್.ಕಾವ್ಯಶ್ರೀ ಮತ್ತು ಗೀತಪ್ರಿಯ ಇವರಿಂದ ಭರತನಾಟ್ಯ ಹಾಗೂ ನೃತ್ಯರೂಪಕ ಹಾಗೂ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಗಜವಾಹನ ಪೂಜೆ, ಅ.03 ರ ಮಧ್ಯಾಹ್ನ 3 ರಿಂದ ಶ್ರೀದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ. 
ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮ ದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾನೈವೇದ್ಯಗಳು ಜರುಗಲಿವೆ, ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು, ನಾಗಭೂಷಣಂ ಹೊಸಪೇಟೆ ಇವರಿಂದ ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಕಾರ್ಯಕ್ರಮ ಜರುಗಲಿದ್ದು, ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಈ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸರ್ವ ಭಕ್ತಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ  ಮನವಿ ಮಾಡಿಕೊಂಡಿದ್ದಾರೆ.
Please follow and like us:
error

Leave a Reply

error: Content is protected !!