ನನಗೂ ಆಫರ್‌‌ ಬಂದಿತ್ತು-ಸಚಿವ ಸಿ.ಎಸ್.ಶಿವಳ್ಳಿ

ಕೊಪ್ಪಳ : ಪೌರಾಡಳಿತ ಖಾತೆ ಬಗ್ಗೆ ಹೆಚ್ಚು ಮಾಹಿತಿ ಪಡೆಯಬೇಕಿದೆ. ಅಧಿಕಾರಿಗಳ ಜೊತೆ ನಾಲ್ಕಾರು ಸಭೆ ನಡೆಸಿ ಇಲಾಖೆಯ ಬೆಳವಣಿಗೆಗಳನ್ನ ಅರಿಯುತ್ತೇನೆ. ಫಾರಂ ನಂಬರ್ ೩ ರಾಜ್ಯಮಟ್ಟದಲ್ಲಿ ಸಮಸ್ಯೆ ಇದೆ. ಕ್ಯಾಬಿನೆಟ್‌ನಲ್ಲಿ ಇದನ್ನ‌ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ

ಪೌರಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಸಚಿವ ಸಿ.ಎಸ್.ಶಿವಳ್ಳಿ ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ.

ಸಚಿವ ಪುಟ್ಟರಂಗಶೆಟ್ಟಿ ಪ್ರಕರಣ ತನಿಖೆಯಲ್ಲಿದೆ. ಸರಕಾರಕ್ಕೆ ಮುಜುಗರದ ಪ್ರಶ್ನೆಯೇ ಇಲ್ಲ. ಸರಕಾರ ಐದು ವರ್ಷ ಸುಭದ್ರವಾಗಿರುತ್ತೆ. ಪ್ರತಿ ಪಕ್ಷದ ಯಾವುದೇ ಆಫರ್ ವರ್ಕೌಟ್ ಆಗಲ್ಲ. ನನಗೂ ಆಫರ್‌‌ ಬಂದಿತ್ತು. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ.ಸ್ಥಳೀಯ ಸಂಸ್ಥೆಗಳ ಅದ್ಯಕ್ಷ, ಉಪಾದ್ಯಕ್ಷರ ಮೀಸಲಾತಿ ಸಂಬಂದಪಟ್ಟ ಪ್ರಕರಣ ಕೋರ್ಟನಲ್ಲಿದೆ. ಶೀಘ್ರವೇ ಕೋರ್ಟ್ ಆದೇಶ ಬರುವ ನಿರೀಕ್ಷೆ ಇದೆ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂಧ್ರ ಹಿಟ್ನಾಳ, ಜಿ.ಪಂ.ಮಾಜಿ ಅದ್ಯಕ್ಷ ರಾಜಶೇಖರ ಹಿಟ್ನಾಳ, ಸುರೇಶ ಬೂಮರೆಡ್ಡಿ, ನಗರಸಭಾ ಸದಸ್ಯ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಕಾಟನ್ ಪಾಷಾ , ಹೊನ್ನೂರಸಾಬ ಬೈರಾಪೂರ ಸೇರಿದಂತೆ ಇತರರು ಉಪಸ್ತಿತರಿದ್ದರು.

Please follow and like us:
error