ಸೋಮಣ್ಣ, ಯಡಿಯೂರಪ್ಪ ಭವಿಷ್ಯ ನ.22ಕ್ಕೆ

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ ಸೋಮಣ್ಣ ಹಾಗೂ ಯಡಿಯೂರಪ್ಪ ಅವರ ಮೇಲಿನ ಖಾಸಗಿ ದೂರನ್ನು ಪರಿಗಣಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಾಳೆ(ನ.22) ತೀರ್ಪು ನೀಡಲಿದೆ.

ಸದ್ಯಕ್ಕೆ  ಸಚಿವ ಸೋಮಣ್ಣ ಅವರು ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಪರ ಪ್ರಚಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು  ಬಳ್ಳಾರಿಗೆ ತೆರಳುವ ಸೂಚನೆ ಸಿಕ್ಕಿದೆ.

ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಶೈಲಜಾ ಸೋಮಣ್ಣ, ವಿ. ಸೋಮಣ್ಣ ಹಾಗೂ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಚರ್ಚೆ ನಡೆದಿದೆ.

1993ರಲ್ಲಿ ಬಿಡಿ‌ಎ ಸ್ವಾದೀನಪಡಿಸಿಕೊಂಡಿದ್ದ ಜಮೀನನ್ನು 2005ರಲ್ಲಿ ಸೋಮಣ್ಣ ಅವರು ತಮ್ಮ ಪತ್ನಿ ಶೈಲಜಾ ಹೆಸರಿನಲ್ಲಿ ನಾಗದೇವನಹಳ್ಳಿಯಲ್ಲಿ 22 ಗುಂಟೆ ಎಕರೆ ಜಮೀನು ಖರೀದಿಸಿದ್ದರು. ವಿವಿ‌ಎಸ್ ಶಿಕ್ಷಣ ಟ್ರಸ್ಟ್ ಹೆಸರಿನಲ್ಲಿ ಪಡೆದ ಈ ಭೂಮಿಯನ್ನು 2009ರಲ್ಲಿ ಅಕ್ರಮವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಿನೋಟಿಫೈ ಮಾಡಿದ್ದಾರೆ  – ಗಲ್ಪ್ ಕನ್ನಡಿಗ

Leave a Reply