fbpx

ಕ್ರಾಂತಿಕಾರಕ ಹೆಜ್ಜೆ : ದೇವದಾಸಿಯರ ಮಕ್ಕಳ ಸಾಮೂಹಿಕ ಮದುವೆ

Koppal

ಜಿಲ್ಲೆಯಲ್ಲಿ ಕಾಂತ್ರಿಕಾರಕ ಕಾರ್ಯಕ್ರಮವೇ ನಡೆದುಹೋಯಿತು. ರಾಜ್ಯದಲ್ಲೇ ಮೊದಲ ಬಾರಿಗೆ ಅಲ್ಲಿ ವಿನೂತನ ಹೆಜ್ಜೆಯನ್ನ ಇಡೋ ಮೂಲಕ ಆ ಸಮುದಾಯ ಹೊಸ ಆಯಾಮ ಕಂಡುಕೊಂಡಿದೆ. ಯಾರನ್ನ ಕಂಡ್ರೆ ಸಮಾಜ ಕೀಳಾಗಿ ಕಾಣ್ತಿತ್ತೋ, ಅಂತವರ ಮಕ್ಕಳಿಗೆ ಅಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡೋ ಮೂಲಕ ಅವರನ್ನ ಮುಖ್ಯವಾಹಿನಿಗೆ ಕರೆತಂದಿದ್ದಾರೆ.
ದೇವದಾಸಿಯರಂದ್ರೆ ಅವರನ್ನ ನೋಡೋ ದೃಷ್ಠಿ ಕೋನವೇ ಬೇರೆ, ಅವರ ಮಕ್ಕಳನ್ನ ಸಮಾಜ ಕಾಣೋ ರೀತಿಯಂತೂ ಹೇಳತೀರದು. ಆದ್ರೇ, ಇದೀಗ ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಮಕ್ಕಳಿಗೆ ಸಾಮೂಹಿಕ ಮದುವೆ ಮಾಡುವ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ದೇವದಾಸಿ ಪದ್ದತಿಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ಕೆ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಮತ್ತು ಮಾದಿಗ ಛಲವಾದಿ ಮಹಾಸಭಾ ಮುಂದಾಗಿದೆ. ಪ್ರೋ. ಬಿ ಕೃಷ್ಣಪ್ಪ ಅವರ 85 ನೇ ಜನ್ಮ ದಿನದ ಅಂಗವಾಗಿ ಕುಷ್ಠಗಿಯ ತಾಲೂಕ ಕ್ರೀಡಾಂಗಣದಲ್ಲಿ ಇಂತಹದೊಂದು ಐತಿಹಾಸಿಕ ಕಾರ್ಯಕ್ರಮ ಮಾಡಲಾಯಿತು. ಈ ಸಾಮೂಹಿಕ ವಿವಾಹದಲ್ಲಿ ಸುಮಾರು 32 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ದೇವದಾಸಿಯರ ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷ ಎನಿಸಿತು. ಅಲ್ದೇ, ಕಾರ್ಯಕ್ರಮಕ್ಕೆ ಚಿತ್ರದುರ್ಗದ ಹಿರಿಯೂರಿನ ಅದಿಜಾಂಬವ ಮಠದ ಷಡಕ್ಷರಿ ಮುನಿ ಸ್ವಾಮಿಗಳು ಪಾಲ್ಗೋಂಡು ನವಜೋಡಿಗಳಿಗೆ ಆರ್ಶಿವಚನ ನೀಡಿದ್ರು. ಇನ್ನೂ, ಮಾಜಿ ಸಚಿವ ಹೆಚ್.ಆಂಜನೇಯ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೋಂಡು ನೂತನ ವಧುವರರಿಗೆ ಆರ್ಶಿವಾದ ಮಾಡಿ, ದೇವದಾಸಿ ಪದ್ಧತಿಯಂತಹ ಅನಿಷ್ಠ ಆಚರಣೆಗಳು ನಿರ್ಮೂಲನೆಯಾಗಬೇಕು. ಅಲ್ದೇ ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳು ಸಿಗಬೇಕು. ದುಶ್ಚಟಕ್ಕೆ ಬಲಿಯಾಗದೇ ಮಕ್ಕಳನ್ನ ಉತ್ತಮ ಶಿಕ್ಷಣವಂತರನ್ನಾಗಿಸ ಬೇಕು ಎಂದ್ರು…
ಇನ್ನೂ, ರಾಯಚೂರು, ಸಿಂಧನೂರು, ಗದಗ, ಬಿಜಾಪುರ, ಕೊಪ್ಪಳ ಹೀಗೇ ಸೇರಿದಂತೆ ರಾಜ್ಯದ ಹಲವಾರು ಭಾಗದ ದೇವದಾಸಿಯರ ಮಕ್ಕಳಿಗೆ ಮದುವೆ ಮಾಡಲಾಯಿತು. ಈ ಸಾಮೂಹಿಕ ವಿವಾಹದಲ್ಲಿ ಪೋಷಕರ ವಿರೋಧದ ನಡಡುವೆಯೂ ದೇವದಾಸಿಯ ಮಗನಾದ ಕಬಡ್ಡಿ ಆಟಗಾರರೊಬ್ರು, ಎರಡು ಕಾಲಿಲ್ಲದ ಅಂಗವಿಕಲೆಯ ಕೈಹಿಡಿದು ಇತರರಿಗೆ ಮಾದರಿಯಾದ್ರು.
ಒಟ್ನಲ್ಲಿ ಜಾತ್ರೆ ಹಾಗೂ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನ ಆಯೋಜಿಸೋದು ಸರ್ವೆಸಾಮಾನ್ಯ. ಆದ್ರೇ, ಸಮಾಜದ ಕಣ್ಣಿಗೆ ಕೀಳಾಗಿ ಕಾಣುವ ಶೋಷಣೆಗೆ ಒಳಗಾದ ದೇವದಾಸಿಯರ ಮಕ್ಕಳಿಗಾಗಿಯೇ ಮಾಡಿದ ಸಾಮೂಹಿಕ ವಿವಾಹ ವಿಶೇಷವಾಗಿತ್ತು. ಇಂತಹ ಕಾರ್ಯಕ್ರಮಗಳು ರಾಜ್ಯದ ಹಲವೆಡೆ ನಡೆದು ಅವರನ್ನು ಕೂ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ..

ಚಂದಾಲಿಂಗಪ್ಪ ಹಾಗೂ ಅವರ ಸಂಘಟನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.

Please follow and like us:
error
error: Content is protected !!