You are here
Home > Koppal News > ಜೂ.21 ರಂದು ತಾಳಕೇರಿ ನೂತನ ಬಸ್ ನಿಲ್ದಾಣ ಅಡಿಗಲ್ಲು ಸಮಾರಂಭ

ಜೂ.21 ರಂದು ತಾಳಕೇರಿ ನೂತನ ಬಸ್ ನಿಲ್ದಾಣ ಅಡಿಗಲ್ಲು ಸಮಾರಂಭ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದಿಂದ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣದ ಅಡಿಗಲ್ಲು ಸಮಾರಂಭ ಜೂ.21 ರಂದು ಬೆಳಿಗ್ಗೆ 10.30 ಕ್ಕೆ ಗ್ರಾಮದ ಬಸ್ ನಿಲ್ದಾಣದ ನಿವೇಶನ ಆವರಣದಲ್ಲಿ ಜರುಗಲಿದೆ.
 ಕಾರ್ಯಕ್ರಮದ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಬಸವರಾಜ ರಾಯರೆಡ್ಡಿ ಅವರು ವಹಿಸುವರು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ.ಹಂಗಾಮಿ ಅಧ್ಯಕ್ಷ ಫಕೀರಪ್ಪ ತಳವಾರ, ಜಿ.ಪಂ.ಸದಸ್ಯ ಅರವಿಂದಗೌಡ ಪಾಟೀಲ್, ತಾ.ಪಂ.ಸದಸ್ಯರಾದ ನಾರಾಯಣಮ್ಮ ಶರಣಪ್ಪ ಕಜ್ಜಿ, ತಾಳಕೇರಿ ಗ್ರಾ.ಪಂ.ಅಧ್ಯಕ್ಷೆ ದೇವಮ್ಮ ಸುಖಮುನಿಯಪ್ಪ ಸಿಂಧೋಗಿ, ಗ್ರಾ.ಪಂ.ಉಪಾಧ್ಯಕ್ಷೆ ಕನಕಮ್ಮ ಬಸಪ್ಪ ಹಿರೇಮನಿ ಸೇರಿದಂತೆ ಗ್ರಾ.ಪಂ.ಸರ್ವ ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಜಿ.ಪಾರ್ಥಸಾರಥಿ  ತಿಳಿಸಿದ್ದಾರೆ.

Leave a Reply

Top