201 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ HDK ಅಭಿಮಾನಿ

ಕೊಪ್ಪಳ :ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಕ್ಕೆ ಹರಕೆ ತೀರಿಸಿದ ಅಭಿಮಾನಿ. ಹಮಾಲಿ ಕಾರ್ಮಿಕನಿಂದ 201 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ್ದಾರೆ. ಕೊಪ್ಪಳದ ಗಂಗಾವತಿಯ ಹೆಚ್ಡಿಕೆ ಅಭಿಮಾನಿ ಹರಕೆ ತೀರಿಸಿದ್ದಾನೆ. ಗಂಗಾವತಿಯ ಆರಾಧ್ಯ ದೈವ ಚನ್ನಬಸವಸ್ವಾಮಿ ದೇವಸ್ಥಾನದಲ್ಲಿ ಕಾಯಿ ಒಡೆದು ಅಭಿಮಾನ ತೋರಿಸಿದ್ದಾರೆ. ಇಮಾಮಸಾಬ ಎಂಬ ಹಮಾಲಿ ಕೆಲಸ ಮಾಡೋ ಕುಮಾರಣ್ಣ ಅಭಿಮಾನಿ

ರೈತರ, ವೃದ್ದರ, ಮಹಿಳೆಯರ, ಯುವಕರ ಪರವಾದ ಸರ್ಕಾರ ನೀಡುತ್ತಾರೆಂದು ಶುಭ ಹೈರೈಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಮತ್ತು ಹರಕೆ ಮಾಡಿಕೊಂಡಿದ್ದ ಅಭಿಮಾನಿ.

ಕುಮಾರಸ್ವಾಮಿ ರವರು ನಾಡಿನ ಮುಖ್ಯಮಂತ್ರಿ ಯಾದರೆ ಎರಡು ನೂರ ಒಂದು ಕಾಯಿ ಹೊಡೆಯವುದಾಗಿ ಗಂಗಾವತಿಯ ಆರಾಧ್ಯದೈವ ಶ್ರೀ ಚನ್ನಬಸವತಾತಾನಲ್ಲಿ ಹರಕೆ ಹೊತ್ತಿದ್ದು ನಗರದ ಲಿಂಗರಾಜಕ್ಯಾಂಪಿನ ಮುಸ್ಲಿಂ ಯುವಕ ಇಮಾಮಸಾಬ ಸನ್ಮಾನ್ಯ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ ನಂತರ ಶ್ರೀ ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಎರಡೂ ನೂರಾಒಂದು ಕಾಯಿಯನ್ನು ಹೊಡೆದು ಹರಕೆ ತೀರಿಸಿದನು.
ಈ ಸಂದರ್ಭದಲ್ಲಿ ಇಮಾಮ್ ಸಾಬ ಶರಮುದ್ದೀನ್ ಹಾಜಪ್ಪ ದಾವಲಸಾಬ ಮಲ್ಲಯ್ಯ ಪಂಪಾಪತಿ ಅಟೇಲ್ ಸಾಬ ಕಳಕಪ್ಪ ಫೀರ್ ಸಾಬ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Please follow and like us:
error