ವಿಮಾ ಕಾನೂನು ತಿದ್ದುಪಡಿ ಮಸೂದೆ 2008 ವಿರೋಧಿಸಿ ವಿಮಾ ನೌಕರರ ಮುಷ್ಕರ

ಕೇಂದ್ರಸರಕಾರವು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿಮಾ ಕಾನೂನುಗಳು (ತಿದ್ದುಪಡಿ)  ಮಸೂದರೆ 2008ನ್ನು ಅಂಗೀಕಾರಗೊಳಿಸಲು ಸಿದ್ದತೆಗಳನ್ನು ನಡೆಸುತ್ತಿದೆ. ಇದು ವಿಮಾ ಕಾನೂನುಗಳಿಗೆ ಸುಮಾರು 111 ತಿದ್ದುಪಡಿಗಳ ಸೂಚನೆಗಳನ್ನು ಹೊಂದಿರುವ ಸಮಗ್ರ ಮಸೂದೆಯಾಗಿದೆ. ಈ ಮಸೂದೆಯ ಹಲವಾರು ಪ್ರಸ್ತಾವಗಳು ಪಾಲಸಿದಾರರ, ವಿಮಾ ಪ್ರತಿನಿಧಿಗಳ ಮತ್ತು ಸಾರ್ವಜನಿಕವಲಯ ವಿಮಾ ಸಂಸ್ಥೆಗಳ ಹಿತಾಸಕ್ತಿಯ ವಿರುದ್ದವಾಗಿದ್ದು ಇದೊಂದು ವಿವಾದಾಸ್ಪದ ಮಸೂದೆಯಾಗಿ ಹೊರಹೊಮ್ಮಿದೆ.  ವಿಮಾ ರಂಗದಲ್ಲಿ ವಿದೇಶ ನೇರ ಬಂಡವಾಳ ಮಿತಿಯನ್ನು ಶೇ.26ರಿಂದ ಶೆ. 49ಕ್ಕೆ  ಹೆಚ್ಚಿಸುವುದ  ಜೀವ ವಿಮಾ ಪ್ರತಿನಿಧಿಗಳ ರಿನ್ಯೂಯಲ್ ಕಮೀಷನ್ ರದ್ದತಿ, ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹಿಂತೆಗೆತ ಮಾಡುವುದು. ಮುಂತಾದ ಅಪಾಯಕಾರಿ ಪ್ರಸ್ತಾಪಗಳನ್ನು ಈ ಮಸೂದೆ ಹೊಂದಿದೆ. 
 ವಿರೋಧ ಪಕ್ಷದಲ್ಲಿದ್ದಾಗ ಈ ಮಸೂದೆಯನ್ನು ವಿರೋಧಿಸಿ ಇದರ ಅಗತ್ಯ ಇಲ್ಲವೆಂದು ಪ್ರತಿಪಾದಿಸಿದ್ದ   ಬಿಜೆಪಿ  ಅಧಿಕಾರಕ್ಕೆ ಬಂದ  ತನ್ನ ಮೊದಲ ಅಧಿವೇಶನದಲ್ಲಿಯೇ  ಮಸೂದೆ ಜಾರಿಗೆ ಮುಂದಾಗಿತ್ತು. 
ಕೇಂದ್ರ ಸರಕಾರವು ಈ ಮಸೂದೆಯ ಜಾರಿಗೆ ಮುಂದಾಗಬಾರದ ಎಂದು ವಿಮಾ ನೌಕರರು, ಪಾಲಸಿದಾರರು, ರಾಷ್ಟ್ರಪ್ರೇಮಿಗಳು ಆಗ್ರಹಿಸುತ್ತಾರೆ. ಮಸೂದೆ ಅಂಗಿಕಾರವಾದರೇ ಮರುದಿನವೇ ಒಂದು ದಿನದ ರಾಷ್ಟ್ರಾದ್ಯಂತ  ಪ್ರತಿಭಟನಾ ಮುಷ್ಕರ ನಡೆಸಲಾಗುವುದು ಎಂದು ವಿಮಾ ನೌಕರರ ಸಂಘ  ರಾಯಚೂರ ಡಿವಿಷನ್ ಎಂ.ರವಿ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.  ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Leave a Reply