fbpx

ಕಾಟ್ರಹಳ್ಳಿ : ಜ.20 ರಂದು ಸುಗಮ ಸಂಗೀತ ಕಾರ್ಯಕ್ರಮ

ಳ ಜ.): ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಗುರು ಪುಟ್ಟರಾಜ ಕಲಾ ಸಾಂಸ್ಕøತಿಕ ಸಂಘ ಕಾಟ್ರಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಾನಯೋಗಿ ಶಿವಯೋಗಿ ಶ್ರೀ ಪುಟ್ಟರಾಜ ಕವಿಗವಾಯಿಗಳವರ ಜನ್ಮ ಶತಮಾನೋತ್ಸವದ ಸವಿ ನೆನಪಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ಕಾಟ್ರಹಳ್ಳಿ ಗ್ರಾಮದಲ್ಲಿ ಜ.20 ರಂದು ಸಂಜೆ 6.30 ಕ್ಕೆ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಹೂವಿನಹಡಗಲಿಯ ಹಿರೇಮಲ್ಲನಕೇರಿಯ ಶ್ರೀ ಬಸವರಾಜದೇವರು, ತಾಮ್ರಗುಂಡಿ ಹಿರೇಮಠದ ಸಣ್ಣ ವೀರಯ್ಯ ಶಾಸ್ತ್ರೀಗಳು, ಕಾಟ್ರಹಳ್ಳಿಯ ತಾಮ್ರಗುಂಡಿ ಹಿರೇಮಠದ ದೊಡ್ಡ ಹುಚ್ಚಿರಯ್ಯ ಅವರು ಪಾಲ್ಗೊಳ್ಳುವರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ವಹಿಸುವರು. ಮುಖ್ಯ ಅತಿಥಿಗಳಾಗಿ ಗಣ್ಯರಾದ ಗವಿಸಿದ್ದಯ್ಯ ಹಿರೇಮಠ, ಶಾಂತವೀರಯ್ಯ ಹಿರೇಮಠ, ದೊಡ್ಡಶೆಟ್ಟೆಪ್ಪ ಮಂಗಳಾಪೂರ, ಪ್ರಕಾಶ ಬಣಗಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ಗ್ರಾ.ಪಂ.ಸದಸ್ಯರಾದ ಹನುಮಪ್ಪ ಕರೇಕುರಿ, ಅಡಿವೆಪ್ಪ ಗದ್ದಿ, ಶೈಲಪ್ಪ, ಕೊಟ್ಟಪ್ಪ ಅಳವುಂಡಿ, ಗವಿಸಿದ್ದಪ್ಪ ಬಳಿಗನೂರು ಅನೇಕರು ಪಾಲ್ಗೊಳ್ಳುವರು. ಕಳಕಯ್ಯ ಎನ್.ಬಲವಂಚಿಮಠ ಅವರು ಸುಗಮ ಸಂಗೀತ ನಡೆಸಿಕೊಡುವರು. ಫಕೀರಪ್ಪ ಕವಲೂರು, ಗವಿಸಿದ್ದಯ್ಯ ಹಿರೇಮಠ ಅವರು ಹಾರ್ಮೋನಿಯಂ ಸಾಥ್ ನೀಡುವರು. ಗ್ಯಾನೇಶ ಗುನ್ನಳ್ಳಿ ಅವರು ತಬಲಾ ಸಾಥ್ ನೀಡುವರು.

Please follow and like us:
error

Leave a Reply

error: Content is protected !!