ಬಾಹುಬಲಿ 2 ರಿಲೀಸ್ ಡೇಟ್ ಫಿಕ್ಸ್.?

ಮೂಲಗಳ ಪ್ರಕಾರ ಬಾಹುಬಲಿ 2 ಚಿತ್ರ ಈ ವರ್ಷದ ಡಿಸೆಂಬರ್‍ನಿಂದ ಚಿತ್ರೀಕರಣ ಆರಂಭಿಸಲಿದ್ದು ಮುಂದಿನ ವರ್ಷದ (2016) ಕ್ರಿಸ್‍ಮಸ್‍ಗೆ ಬಿಡುಗಡೆಗೊಳ್ಳುವುದಕ್ಕೆ ತಯಾರಿ ನಡೆಸಿದೆಯಂತೆ. ಇದೇ ಡೇಟ್‍ಗೆ ಎಂದರೆ ಮುಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅಮೀರ್ ಖಾನ್ ಅವರ ದಂಗಾಲ್ ಚಿತ್ರವೂ ಬಿಡುಗಡೆಗೆ ತಯಾರಿ ನಡೆಸಿದ್ದು ಇದರಿಂದ ಅಮೀರ್ ಖಾನ್ ಬೇಸರಗೊಂಡಿದ್ದಾರಂತೆ. ಮೊದಲ ಭಾಗಕ್ಕಿಂತ, ಎರಡನೇ ಭಾಗವನ್ನು ಅದ್ಧೂರಿಯಾಗಿ ತೆರೆಮೇಲೆ ತರಲು ಯೋಜನೆ ರೂಪಿಸಿರುವ ಎಸ್‍ಎಸ್ ರಾಜಮೌಳಿ ಬಾಹುಬಲಿ ರಿಲೀಸ್ ಮಾಡಲು ಒಂದು ವರ್ಷ ಬೇಕಾಗಲಿದೆ. ಹೀಗಾಗಿ ಚಿತ್ರತಂಡ ಮುಂದಿನ ವರ್ಷದ ಕ್ರಿಸ್‍ಮಸ್‍ಗೆ ಚಿತ್ರ ರಿಲೀಸ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

Leave a Reply