2ತಲೆ ಮಗು ಜನನ

ಕುಷ್ಟಗಿ : ಸಮೀಪದ ಹಿರೇಗೊಣ್ಣಾಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ತಲೆಯುಳ್ಳ ವಿಚಿತ್ರ ಮಗುವಿಗೆ ತಾಯಿಯೊಬ್ಬಳು ಜನ್ಮ ನೀಡಿದ ಘಟನೆ ನಡೆದಿದ್ದು ಜನರಲ್ಲಿ ಅಚ್ಚರಿ ಮೂಡಿದೆ. ತುಮರಿಕೊಪ್ಪ ಗ್ರಾಮದ ಹನುಮವ್ವ ಎಂಬ ಮಹಿಳೆ ಈ ಮಗುವಿಗೆ ಜನ್ಮ ನೀಡಿದ್ದ ತಾಯಿ. ನೋಡಲು ಬೆಳೆದ ಮಗುವಿನಂತೆ ಕಾಣುವ ಈ ಎರಡು ತಲೆಯುಳ್ಳ ಮಗು ಸದ್ಯ ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 ಈ ಮಹಿಳೆಗೆ ಇದು ಎರಡನೇ ಮಗುವಾಗಿದ್ದು 7-8 ತಿಂಗಳ ಮಗುವಿನಂತೆ ವಿಚಿತ್ರವಾಗಿ ಕಾಣುತ್ತಿದೆ. ನಾಲ್ಕೂವರೆ ಕೆ.ಜಿ. ತೂಕ ಇದ್ದು ಹಿಂದಿನ ಭಾಗದಲ್ಲಿಯೂ ಒಂದು ತಲೆ ಇದೆ. ಅಲ್ಲದೆ ಅದಕ್ಕೆ ಚಿಕ್ಕದಾಗಿ ಮೂಗು, ಕಣ್ಣಿನ ಆಕಾರ ಇರುವುದು ಕಾಣುತ್ತದೆ. ಮುಖದ ಹಿಂಭಾಗದಲ್ಲಿರುವ ಈ ತಲೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದಾಗಿದೆ ಎಂದು ವೈದ್ಯರ ಅಭಿಪ್ರಾಯಪಟ್ಟಿದ್ದಾರೆ

Please follow and like us:
error

Related posts

Leave a Comment