ಕೊಪ್ಪಳ : 2-1-2010ರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ

೨-೧-2010ರಂದು ಜರುಗಿದ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಂದಾಜು ಒಂದು ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಸಂಜೆ ೫.೫೦ ಕ್ಕೆ ಆರಂಭವಾದ ರಥಮಹೋತ್ಸವದ ದೃಶ್ಯ ವೀಕ್ಷಿಸಲು ಸೇರಿದ್ದ ಸಾವಿರಾರು ಜನರು ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು. ಜಾತ್ರೆಗೆ ಬಂದವರಿಗಾಗಿ ಏರ್ಪಡಿಸಲಾಗಿರುವ ಮಹಾಪ್ರಸಾದ ವಿತರಣೆಗೆ ೫೦೦೦೦ ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು. ಮಹಾಪ್ರಸಾದ ವಿತರಣೆಗಾಗಿ ಮಾಡಿರುವ ವ್ಯವಸ್ಥೆಯು ಸರ್ವರ ಪ್ರಶಂಸೆಗೆ ಒಳಗಾಗಿದೆ.
ಮಧ್ಯರಾತ್ರಿಯಲ್ಲಿಯೂ ಮಿಂಚುತ್ತಿದೆ ಜಾತ್ರೆ: ನಾಡಿನ ನಾನಾ ಕಡೆಯಿಂದ ಬರುತ್ತಿರುವ ಭಕ್ತರು, ಎಲ್ಲರ ಹೊಟ್ಟೆ ತುಂಬಿಸುತ್ತಿರುವ ಬಗೆಬಗೆಯ ಭಕ್ಷ್ಯಗಳು, ಎಲ್ಲೆಡೆಸಂಭ್ರಮದ ಅಲೆ ಇದು ಜಾತ್ರೆಯಲ್ಲಿ ಕಂಡುಬರುತ್ತಿರುವ ದೃಶ್ಯ.
ರಾತ್ರಿ ಹೆಚ್ಚಾದಂತೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ.ರಾತ್ರಿ 11 ಗಂಟೆಯವರೆಗೂ ದಾಸೋಹ ನಡೆದೇ ಇದೆ. .ಮಠದ ದೀಪಾಲಂಕಾರ ಮನಸೆಳೆಯುವಂತಿದೆ
Please follow and like us:
error