ಉಪಚುನಾವಣೆ ಬಹಿಷ್ಕಾರ ,19ಕ್ಕೆ ಭಾಗ್ಯನಗರ ಬಂದ್

ಗೇಟ್ ನಂ.62ರಲ್ಲಿಯೇ ರೈಲ್ವೆ ಮೇಲ್ ಸೇತುವೆ ನಿರ್ಮಿಸಬೇಕು ಇದರ ಕುರಿತು ವಾರದೊಳಗೆ ತೀರ್ಮಾನ ಕೈಗೊಳ್ಳಬೇಕು ಇಲ್ಲದಿದ್ದರೆ ಉಪಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ರೈಲ್ವೆ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಭಾಗ್ಯನಗರ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಗೇಟ್. 62ರಲ್ಲಿಯ ಸೇತುವೆ ನಿರ್ಮಾಣಕ್ಕೆ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ಇನ್ನೂ ಆಟವಾಡುತ್ತಿದ್ದಾರೆ. ಜನರ ತಾಳ್ಮೆಯೊಂದಿಗೆ ಆಟವಾಡುತ್ತಿದ್ದಾರೆ. ಸೇತುವೆ ಬೇಡಿಕೆಯಂತೆ ನಿರ್ಮಾಣವಾಗಬೇಕು. ಅದಕ್ಕಾಗಿ ಹೋರಾಟಕ್ಕೆ ಸಿದ್ದ ಎಂದು ಎಚ್ಚರಿಸಿದ್ದಾರೆ. ಸಭೆಯಲ್ಲಿ ,ಶ್ರೀನಿವಾಸ ಗುಪ್ತಾ, ರಾಘವೇಂಧ್ರ ಪಾನಘಂಟಿ, ಕೃಷ್ಣ ಇಟ್ಟಂಗಿ, ಪರಶುರಾಮ್ ಪವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error