ಕೊಪ್ಪಳ : ತಿಪ್ಪನಾಳ ಕೆರೆ ತೆರವು ವಿರೋಧಿಸಿ ಹೋರಾಟ ಮಾಡಿ ಜೈಲಿನಲ್ಲಿದ್ದ ದಲಿತರಿಗೆ ಜಾಮೀನು ದೊರೆತ ಹಿನ್ನೆಲೆ ಡಿಸಿ ಕಚೇರಿ ಎದುರಿಗಿನ ಪ್ರತಿಭಟನೆಗೆ ಅಂತ್ಯ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯ ತಿಪ್ಪನಾಳದ ದಲಿತರನ್ನು ಜಮೀನಿನಿಂದ ಹೊರ ಹಾಕಿ ಬೆಳೆದ ಬೆಳೆಯನ್ನು ಜೆಸಿಬಿಗಳಿಂದ ತೆರವು ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿರೋದಿಸಿದ್ದ ದಲಿತರನ್ನು ಬಂಧಿಸಲಾಗಿತ್ತು.ಟಾಟಾ ಸೋಲಾರ್ ಕಂಪನಿಯವರಿಗಾಗಿ ಜಮೀನನ್ನು ವಶಪಡಿಸಿಕೊಂಡಿದ್ದು ಇದರ ಹಿಂದೆ ಸಚಿವ ಡಿಕೆ ಶಿವಕುಮಾರ ಇದ್ದಾರೆ ಎಂದು ಪ್ರತಿಭಟನಾಕಾರರು ಅರೋಪಿಸಿದ್ದರು.

ದಲಿತರ ಬಂಧನ ವಿರೋದಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಿರಂತರ ೨೯ ದಿನಗಳ ಕಾಲ ಪ್ರತಿಭಟನೆ ನಡೆದಿತ್ತು.ಧರಣಿ ಸತ್ಯಾಗ್ರಹವನ್ನು ನಿಲ್ಲಿಸಿ ಮುಂದೆ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ.‌.