fbpx

ಜ.19 ರಂದು ಮಂಗಳೂರಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಂದೇ ಮಾತರಂ ಯುವ ಸಾಂಸ್ಕøತಿಕ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಕದ್ರಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜ.19 ರಂದು ಸಂಜೆ 6 ಗಂಟೆಗೆ ಮಂಗಳೂರು ಗ್ರಾಮದ ಮೇನ್ ಬಜಾರ್ ಬಯಲು ವೇದಿಕೆಯಲ್ಲಿ ಜರುಗಲಿದೆ.       ದಿವ್ಯ ಸಾನಿಧ್ಯವನ್ನು ನಗರಗಡ್ಡಿ ಮಠದ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯ ಅಶೋಕ ತೋಟದ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ತಾ.ಪಂ. ಸದಸ್ಯೆ ಸುಮಂಗಲಾ ಉಪ್ಪಾರ, ಗ್ರಾ.ಪಂ. ಅಧ್ಯಕ್ಷೆ ಶಾಂತಾ ಗುಡಿಸಲಮನಿ, ಪಿಡಿಓ ಅನಂತರಾವ್ ದೇಸಾಯಿ, ಉಪನ್ಯಾಸಕರಾದ ಆರ್.ಎಸ್.ಸರ್‍ಗಣಾಚಾರ, ಶರಣಪ್ಪ ಉಮಚಗಿ, ಕೈಗಾರಿಕಾ ತರಬೇತಿ ಸಂಸ್ಥೆಯ ಜೆಟಿಓ ಎಮ್.ಎನ್.ಹುಕಮನಾಳ ಮಠ, ಮಂಗಳೇಶ್ವರ ಯುವಕ ಸಂಘದ ಅಧ್ಯಕ್ಷ ಮಂಗಳೇಶ ಯತ್ನಟ್ಟಿ, ವಂದೇಮಾತರಂ ಯುವ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಹಳ್ಳಿಗುಡಿ, ವಂದೇಮಾತರಂ ಸಂಘದ ಅಧ್ಯಕ್ಷ ರಾಕೇಶ ಕಾಂಬ್ಳೇಕರ, ಹಿರಿಯ ಸಾಹಿತಿ ನೀಲಪ್ಪ ವಕ್ರ ಅನೇಕರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸುಜಾತ ಬಂಡ್ರಕಲ್ ಅವರು ಸುಗಮ ಸಂಗೀತ ನಡೆಸಿಕೊಡಲಿದ್ದಾರೆ.

Please follow and like us:
error

Leave a Reply

error: Content is protected !!