ರೈಲ್ವೆ ಗೇಟ್: ಭಾಗ್ಯನಗರ ಬಂದ್ 19ಕ್ಕೆ

ಕೊಪ್ಪಳ ಮತ್ತು ಭಾಗ್ಯನಗರ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಗೇಟ್ 62ನ್ನು ತಿಂಗಳೊಳಗೆ ಕಾಮಗಾರಿ ಆರಂಬಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಭಾಗ್ಯನಗರ ರೇಲ್ವೆ ಗೇಟ್ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಹೋರಾಟದ ಅಂಗವಾಗಿ ದಿ.19ರಂದು ಭಾಗ್ಯನಗರ ಬಂದ್ ಮಾಡಲಾಗುವುದು ಎಂದಿದೆ. ಜನಪ್ರತಿನಿಧಿಗಳ ಸಭೆಯ ನೆಡಸಿ 62ನೇ ರೇಲ್ವೆ ಗೇಟ್ ನಿರ್ಮಾಣ ಮಾಡದಿದ್ದರೆ ಉಗ್ರ ಹೋರಾಟದೊಂದಿಗೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಗುಪ್ತಾ, ರಾಘವೇಂಧ್ರ ಪಾನಘಂಟಿ, ಕೃಷ್ಣ ಇಟ್ಟಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error