ಆ.19 ರಿಂದ ಕೊಪ್ಪಳದಲ್ಲಿ ಸೇನಾ ನೇಮಕಾತಿ ರ್ಯಾಲಿ

 ಭಾರತೀಯ ಭೂಸೇನೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ರ್ಯಾಲಿ ಆ.19 ರಿಂದ 23 ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆ.19 ರಂದು ಸೋಲ್ಜರ ಟೆಕ್ನಿಕಲ್,  ಸೋಲ್ಜರ ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ರ್ಯಾಲಿ ನಡೆಯಲಿದ್ದು, ಅಂದು ಬೀದರ, ಗುಲಬರ್ಗಾ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆ.20 ರಂದು ಸೋಲ್ಜರ ಟ್ರೇಡ್ಸ್‍ಮನ ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಬೀದರ್, ಗುಲಬರ್ಗಾ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆ.21 ರಂದು ಸೋಲ್ಜರ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಬೀದರ, ಗುಲಬರ್ಗಾ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆ.22 ರಂದು ಸೋಲ್ಜರ ಕ್ಲರ್ಕ/ಸ್ಟೋರ ಕೀಪರ/ಟೆಕ್ನಿಕಲ್ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಬೆಳಗಾವಿ, ರಾಯಚೂರು, ಬಳ್ಳಾರಿ, ಬೆಂಗಳೂರು (ಗ್ರಾಮೀಣ), ಕೋಲಾರ, ಮೈಸೂರು, ಚಾಮರಾಜನಗರ, ಗದಗ, ಹಾವೇರಿ, ಮಂಡ್ಯ, ಚಿಕ್ಕಬಳ್ಳಾಪುರ, ರಾಮನಗರ, ಬಾಗಲಕೋಟ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೇರಾ, ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ವಿಜಾಪುರ ಹಾಗೂ ಧಾರವಾಡ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆ.23 ರಂದು ಸೋಲ್ಜರ ಕ್ಲರ್ಕ/ಸ್ಟೋರಕೀಪರ/ಟೆಕ್ನಿಕಲ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಬೀದರ, ಗುಲಬರ್ಗಾ, ಕೊಪ್ಪಳ, ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಮಾಜಿ ಸೈನಿಕರಿಗಾಗಿ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಹಾಜರಾಗಬಹುದು. 
 ಸೋಲ್ಜರ ಜನರಲ್ ಡ್ಯೂಟಿ ಹುದ್ದೆಗೆ  10ನೇ ತರಗತಿ ಉತ್ತೀರ್ಣರಾಗಿರಬೇಕು. ಸೋಲ್ಜರ ಟೆಕ್ನಿಕಲ್ ಹುದ್ದೆಗೆ ಪಿಯುಸಿ ವಿಜ್ಞಾನದಲ್ಲಿ ಉತ್ತೀರ್ಣರಾಗಿರಬೇಕು. ಸೋಲ್ಜರ ಟೆಕ್ನಿಕಲ್ (ಎ.ವಿ.ಎನ್./ಎ.ಎಂ.ಎನ್.) ಮತ್ತು ಸೋಲ್ಜರ ನರ್ಸಿಂಗ್ ಅಸಿಸ್ಟಂಡ್ ಹುದ್ದೆಗಳಿಗೆ ಪಿಯುಸಿ ವಿಜ್ಞಾನದಲ್ಲಿ 50% ಅಂಕ ಪಡೆದಿರಬೇಕು. ಸೋಲ್ಜರ ಸ್ಟೋರಕೀಪರ/ಕ್ಲರ್ಕ ಹುದ್ದೆಗಳಿಗೆ ಯಾವುದೇ ಪಿಯುಸಿಯಲ್ಲಿ 50% ಅಂಕ ಪಡೆದಿರಬೇಕು. ಸೋಲ್ಜರ ಟ್ರೇಡ್ಸಮನ್ ಹುದ್ದೆಗಳಿಗೆ ಸಾಮಾನ್ಯ ವರ್ಗದಲ್ಲಿ 10ನೇ ತರಗತಿ ಪಾಸಾಗಿರಬೇಕು. 
ಸೋಲ್ಜರ ಟೆಕ್ನಿಕಲ್/ಸೋಲ್ಜರ ನರ್ಸಿಂಗ್ ಅಸಿಸ್ಟೆಂಟ ಸೋಲ್ಜರ ಟ್ರೇಡ್ಸಮನ್/ಸೋಲ್ಜರ ಕ್ಲರ್ಕ/ಸ್ಟೋರ ಕೀಪರ/ಟೆಕ್ನಿಕಲ್ ಹುದ್ದೆಗಳಿಗಾಗಿ 17 ರಿಂದ 23 ವರ್ಷದೊಳಗೆ ಇರಬೇಕು. (19-8-1991 ರಿಂದ 19-2-1997 ರೊಳಗೆ ಜನಿಸಿರಬೇಕು) ಸೋಲ್ಜರ ಜನರಲ್ ಡ್ಯೂಟಿ ಹುದ್ದೆಗೆ 17 ರಿಂದ 21 ವರ್ಷ (19-8-1993 ರಿಂದ 19-2-1997 ರೊಳಗೆ ಜನಿಸಿರಬೇಕು). ದೈಹಿಕ ಪರೀಕ್ಷೆಗೆ ಸಂಬಂಧಿಸಿದಂತೆ 1.6 ಕಿ.ಮೀ. ದೂರವನ್ನು 6 ನಿಮಿಷದಲ್ಲಿ ಓಡಬೇಕು. ಪುಲ್ ಅಪ್ಸ : ಕನಿಷ್ಟ 6, ಗರಿಷ್ಟ 10 ತೆಗೆಯಬೇಕು. ಬ್ಯಾಲನ್ಸ: ಜಿಗ ಜಾಗ ಸಮತೋಲನ ನಡಿಗೆ ನಡೆಯಬೇಕು. 9 ಅಡಿ ತೆಗ್ಗು ಜಿಗಿಯಬೇಕು. ಸೋಲ್ಜರ ಜನರಲ್ ಡ್ಯೂಟಿ/ಟ್ರೇಡ್ಸಮನ್ ಹುದ್ದೆಗಳಿಗೆ 166 ಸೆಂ.ಮೀ. ಎತ್ತರ, ಸೋಲ್ಜರ ಟೆಕ್ನಿಕಲ್/ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ 165 ಸೆಂ.ಮೀ. ಎತ್ತರ, ಸ್ಟೋರ ಕೀಪರ ಹುದ್ದೆಗಳಿಗೆ 162 ಸೆಂ.ಮೀ. ಎತ್ತರ ದೇಹದಾಡ್ರ್ಯತೆ ಹೊಂದಿರಬೇಕು. ಎಲ್ಲಾ ಹುದ್ದೆಗಳಿಗೆ 77/82 ಸೆಂ.ಮೀ. ಹೊಂದಿರಬೇಕು. 50 ಕೆ.ಜಿ. ತೂಕ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ತಮ್ಮ 10ನೇ ತರಗತಿ, ಪಿಯುಸಿ, ಐಟಿಐ, ಕ್ರೀಡೆ, ಎನ್‍ಐಸಿ ಇವುಗಳ ಮೂಲ ಹಾಗೂ 2 ದೃಢೀಕೃತ ನಕಲು ಪ್ರತಿಗಳನ್ನು ಹೊಂದಿರಬೇಕು. ಜೊತೆಗೆ 12 ಪಾಸಪೊರ್ಟ ಅಳತೆಯ ಕಲರ್ ಭಾವಚಿತ್ರಗಳನ್ನು ಹೊಂದಿರಬೇಕು. ಈ ರ್ಯಾಲಿಯು ಬೆಳಿಗ್ಗೆ ಬೇಗನೆ ಪ್ರಾರಂಭವಾಗುವುದರಿಂದ ಹಿಂದಿನ ದಿನ ಅಂದರೆ ಆ. 18 ರಂದು ಮಧ್ಯಾಹ್ನ 2 ಗಂಟೆಗೆ ಅಭ್ಯರ್ಥಿಗಳು ಮೈದಾನದ ಹತ್ತಿರ ಇರಬೇಕು. ಅಲ್ಲದೇ ಇದಕ್ಕೆ ಯಾವುದೇ ಪ್ರಯಾಣ ವೆಚ್ಚ ಇನ್ನಿತರ ವೆಚ್ಚ ನೀಡಲಾಗುವುದಿಲ್ಲ. ಈ ಹುದ್ದೆಗೆ ಯಾವುದೇ ಅರ್ಜಿ ನಮೂನೆ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳು ವಾಸವಾಗಿರುವ ಸ್ಥಳದ ರಹವಾಸಿ ಪ್ರಮಾಣ ಪತ್ರ ಹಾಗೂ ನಡತೆಯ ಪ್ರಮಾಣ ಪತ್ರ ಕಡ್ಡಾಯವಾಗಿ ಆಂಗ್ಲಭಾಷೆಯಲ್ಲಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಸೇನಾ ಭರ್ತಿ ಕಾರ್ಯಾಲಯ ಬೆಳಗಾವಿ  ದೂರವಾಣಿ ಸಂಖ್ಯೆ: 0831-2465550 ಅಥವಾ 080-25599290 ಹಾಗೂ ತಿತಿತಿ.zಡಿobಚಿಟಿgಚಿಟoಡಿe.gov.iಟಿ ವೆಬ್‍ಸೈಟ್ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ ಸಂಖ್ಯೆ: 08539-220859 ಮೊ.9449310423 ಸಂಪರ್ಕಿಸಬಹುದಾಗಿದೆ .
Please follow and like us:
error